ದೇಶ

ಆಗಸ್ಟಾ ಹಗರಣ ಕುರಿತು ಸೋನಿಯಾ ಪ್ರಶ್ನಿಸಲು ಪ್ರಧಾನಿ ಧೈರ್ಯ ಮಾಡಲ್ಲ: ಕೇಜ್ರಿವಾಲ್

Mainashree
ನವದೆಹಲಿ: ಆಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿ ಹಗರಣ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಲು ಪ್ರಧಾನಿ ನರೇಂದ್ರ ಮೋದಿ ಧೈರ್ಯ ಮಾಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 
ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಶೀಘ್ರ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರದಡಿಯಲ್ಲಿ ನಡೆಯುತ್ತಿರುವ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ತನಿಖೆ ಒಂದು ಇಂಚು ಮುಂದುವರೆದಿಲ್ಲ ಎಂದು ಆರೋಪಿಸಿದ್ದಾರೆ. 
2014ಕ ಚುನಾವಣೆ ಸಂದರ್ಭದಲ್ಲಿ ಮೋದಿ ದೇಶದ ಜನತೆಗೆ ಭ್ರಷ್ಟರನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಯಾರೊಬ್ಬನನ್ನು ಜೈಲಿಗೆ ಕಳುಹಿಸಿಲ್ಲ... ತನಿಖೆಗಳು ಒಂದಿಂಚು ಮುಂದೆ ಸರಿದಿಲ್ಲ ಎಂದು ಹೇಳಿದ್ದಾರೆ. 
ಆಗಸ್ಟಾ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಯಾಕೆ ವಿಚಾರಣೆಗೊಳಪಡಿಸುತ್ತಿಲ್ಲ. ಮೋದಿಜಿಯವರು ಹಗರಣ ಸಂಬಂಧ ಸೋನಿಯಾ ಅವರನ್ನು ಪ್ರಶ್ನಿಸುವ ಧೈರ್ಯ ಮಾಡುವುದಿಲ್ಲ ಎಂದ ಅವರು, ಪ್ರಧಾನಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆ ಹೊರತು, ರಕ್ಷಣೆ ನೀಡಬಾರದು. ಸೋನಿಯಾ ಅವರನ್ನು ಈ ಸಂಬಂಧ ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
SCROLL FOR NEXT