ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ (ಸಂಗ್ರಹ ಚಿತ್ರ) 
ದೇಶ

ಲಂಚಾವತಾರ: ವಿಶ್ವಾಸ ಮತಯಾಚನೆಗೂ ಮುನ್ನವೇ ಮತ್ತೊಂದು ವಿಡಿಯೋ ಬಹಿರಂಗ

ಸರ್ಕಾರದ ಉಳಿವಿಗಾಗಿ ಇನ್ನು ಎರಡೇ ದಿನದಲ್ಲಿ ಉತ್ತರಾಖಂಡ ಸಿಎಂ ಹರೀಶ್ ರಾವತ್ ವಿಶ್ವಾಸ ಮತ ಯಾಚನೆ ಮಾಡುತ್ತಿದ್ದು, ಇದಕ್ಕೂ ಮೊದಲೆ ಲಂಚಾವತಾರದ ಮತ್ತೊಂದು ವಿಡಿಯೋ ಬಹಿರಂಗವಾಗಿದೆ...

ಡೆಹ್ರಾಡೂನ್: ಸರ್ಕಾರದ ಉಳಿವಿಗಾಗಿ ಇನ್ನು ಎರಡೇ ದಿನದಲ್ಲಿ ಉತ್ತರಾಖಂಡ ಸಿಎಂ ಹರೀಶ್ ರಾವತ್ ವಿಶ್ವಾಸ ಮತ ಯಾಚನೆ ಮಾಡುತ್ತಿದ್ದು, ಇದಕ್ಕೂ ಮೊದಲೆ ಲಂಚಾವತಾರದ  ಮತ್ತೊಂದು ವಿಡಿಯೋ ಬಹಿರಂಗವಾಗಿದೆ.

ಕಾಂಗ್ರೆಸ್ ಶಾಸಕರೊಬ್ಬರು ಲಂಚ ಸ್ವೀಕಾರ ಮಾಡಿದ ಕುರಿತು ತಪ್ಪೊಪ್ಪಿಕೊಂಡಿರುವ ಕುಟುಕು ಕಾರ್ಯಾಚರಣೆ ವಿಡಿಯೋವನ್ನು ಖಾಸಗಿ ಸುದ್ದಿವಾಹಿನಿ ಪ್ರಸಾರ ಮಾಡಿದ್ದು, ಪ್ರಕರಣದಿಂದ  ಈಗಗಾಲೇ ಸಾಕಷ್ಟು ಮುಜುಗರಕ್ಕೀಡಾಗಿರುವ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ವರ್ಚಸ್ಸಿಗೆ ಮತ್ತೆ ಧಕ್ಕೆಯಾಗಿದೆ. ಕಾಂಗ್ರೆಸ್ ಶಾಸಕ ಮದನ್ ಬಿಶ್ತ್ ಅವರು ಬಂಡಾಯ ಶಾಸಕ ಹರಕ್  ಸಿಂಗ್ ರಾವತ್ ಅವರ ಬಳಿ 12 ಮಂದಿ ಕಾಂಗ್ರೆಸ್ ಶಾಸಕರಿಗೆ ಲಕ್ಷಾಂತರ ರುಪಾಯಿಗಳನ್ನು ನೀಡಿರುವುದರ ಹಿಂದಿನ ಸೂತ್ರಧಾರಿ ತಾನೇ ಎಂದು ಹೇಳಿಕೊಂಡಿದ್ದು, ಉಪಸಭಾಧ್ಯಕ್ಷ ಎಪಿ.  ಮೈಖುರಿ ಸೇರಿದಂತೆ 12 ಕಾಂಗ್ರೆಸ್ ಶಾಸಕರಿಗೆ ಪದಚ್ಯುತ ಮುಖ್ಯಮಂತ್ರಿಯ ಪರವಾಗಿ ಲಕ್ಷಾಂತರ ರುಪಾಯಿ ಒದಗಿಸಲಾಗಿತ್ತು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ರಾವತ್ ಅವರು 25 ಲಕ್ಷ ರೂಪಾಯಿಗಳನ್ನು ಕೆಲವು ಎಂಎಲ್​ಎಗಳಿಗೆ ಮತ್ತು ಮೈಖುರಿ ಅವರಿಗೆ 50 ಲಕ್ಷ ರುಪಾಯಿ ನೀಡಿದ್ದಾರೆ ಎಂದು ಬಿಶ್ತ್ ಹೇಳಿದ್ದು, ಕೂಡಾ ವಿಡಿಯೋದಲ್ಲಿ ದಾಖಲಾಗಿದೆ.

‘ನಾನು ಸಂಬಳವನ್ನೇ ಪಡೆದುಕೊಳ್ಳುವುದಿಲ್ಲ, ಆದರೆ ತಿಂಗಳಿಗೆ 5ರಿಂದ 10 ಲಕ್ಷ ರುಪಾಯಿಗಳನ್ನು ಬಯಸಿದಾಗೆಲ್ಲಾ ಮುಖ್ಯಮಂತ್ರಿಯಿಂದ ಪಡೆದುಕೊಳ್ಳುತ್ತೇನೆ’ ಎಂದು ನಿರ್ಲಜ್ಜ ಶಾಸಕ  ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.  "ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳು ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳನ್ನು ಅಕ್ರಮ ಗಣಿಗಾರಿಕೆ ಟ್ರಕ್​ಗಳ  ಬಿಡುಗಡೆಗೆ ಸಂಗ್ರಹಿಸುತ್ತಾರೆ. ಗಣಿಗಾರಿಕೆ ಪರವಾನಗಿಗಳು ಮಾರಾಟ ಮೂಲಕ ರಾವತ್ ಅವರು ಸುಮಾರು 27 ಕೋಟಿ ರುಪಾಯಿ ಸಂಪಾದನೆ ಮಾಡಿದ್ದಾರೆ ಎಂದು ಬಿಶ್ತ್ ವಿಡಿಯೋದಲ್ಲಿ  ಹೇಳಿದ್ದಾರೆ. ಇದು ಇದೀಗ ಹರೀಶ್ ರಾವತ್ ಅವರನ್ನು ತೀವ್ರ ಮುಜುಗರಕ್ಕೀಡು ಮಾಡಿದ್ದು, ಪ್ರತಿಪಕ್ಷಗಳು ಇದನ್ನೇ ದಾಳಮಾಡಿಕೊಂಡು ಹರೀಶ್ ರಾವತ್ ವಿರುದ್ಧ ಟೀಕಾ ಪ್ರಹಾರವನ್ನೇ  ನಡೆಸಿದ್ದಾರೆ.

ಉತ್ತರಾಖಂಡ ಬಿಜೆಪಿ ಮುಖಂಡ ಮತ್ತು ಪಕ್ಷದ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯಾನಂದ್ ಮಾತನಾಡಿ, ಹರೀಶ್ ರಾವತ್ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವ ಸಲುವಾಗಿ ಎಂತಹ  ಕೃತ್ಯದಲ್ಲಿ ಬೇಕಿದ್ದರೂ ಪಾಲ್ಗೊಳ್ಳುತ್ತಾರೆ. ಸಿಎಂ ಪದವಿಗಾಗಿ ತಮ್ಮದೇ ಶಾಸಕರನ್ನೂ ಕೂಡ ಖರೀದಿ ಮಾಡುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT