ದೇಶ

ಬಾಂಗ್ಲಾ ಗಡಿಯಲ್ಲಿ ಬಿಎಸ್ ಎಫ್ ಕಾರ್ಯಾಚರಣೆ; 20 ಲಕ್ಷ ಮೌಲ್ಯದ ನಕಲಿ ನೋಟು ವಶ, 2 ಬಂಧನ

Srinivasamurthy VN

ಮಾಲ್ಡಾ: ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ತುರ್ತು ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆಯ ಯೋಧರು ಭಾರತದೊಳಗೆ ಸಾಗಿಸಲು ಯತ್ನಿಸಿದ ಸುಮಾರು 20 ಲಕ್ಷ ರು. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಂಗ್ಲಾ ಮತ್ತು ಭಾರತ ಗಡಿಯಲ್ಲಿರುವ ಬೈಸ್ನಾಬ್‌ನಗರ್ ಬಳಿ ಭಾರತದೊಳಕ್ಕೆ ಖೋಟಾನೋಟು ಸಾಗಿಸುತ್ತಿದ್ದ ಬಾಂಗ್ಲಾ ಪ್ರಜೆಗಳನ್ನು ಗಡಿಭದ್ರತಾ ಪಡೆ(ಬಿಎಸ್‌ಎಫ್) ಯೋಧರು ಬಂಧಿಸಿ  ಸುಮಾರು 20 ಲಕ್ಷ ರು. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರ ಮಧ್ಯರಾತ್ರಿ ಯುವಕರಿಬ್ಬರು ಖೋಟಾನೋಟುಗಳೊಂದಿಗೆ ಗಡಿಯಲ್ಲಿ ನುಸುಳುತ್ತಿದ್ದಾಗ  ಭದ್ರತಾಪಡೆ ಸಿಬ್ಬಂದಿ ಅವರನ್ನು ಸುತ್ತುವರಿದು ಅವರನ್ನು ಬಂಧಿಸಿದ್ದಾರೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ವಶಪಡಿಸಿಕೊಂಡಿರುವ ಎಲ್ಲ ನೋಟುಗಳು 500 ಮತ್ತು 1000 ಮುಖಬೆಲೆ ಹೊಂದಿದ್ದು, ಈ ನೋಟನ್ನು ಬ್ಯಾಗ್‌ವೊಂದರಲ್ಲಿ ತುಂಬಿಕೊಂಡು ಇವರು ಭಾರತ ಗಡಿ ಪ್ರವೇಶಿಸುತ್ತಿದ್ದರು ಎಂದು  ತಿಳಿದುಬಂದಿದೆ. ಪ್ರಸ್ತುತ ನೋಟು ತುಂಬಿದ್ದ ಬ್ಯಾಗ್‌ನ್ನು ಬೈಸ್ನಾಬ್‌ನಗರ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಅರೋಪಿಗಳನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

SCROLL FOR NEXT