ದೇಶ

ನೀರು ಕದ್ದಿದ್ದಕ್ಕೆ 55 ವರ್ಷದ ರೈತನಿಗೆ ಬಂಧನದ ಶಿಕ್ಷೆ

Shilpa D

ನವದೆಹಲಿ: ಬರಪೀಡಿತ ಉತ್ತರ ಪ್ರದೇಶದ ಬಂದೇಲುಖಂಡದ ಉರ್ಮಿಲ್ ಜಲಾಶಯದಿಂದ ನೀರು ಕದ್ದ ಆರೋಪದ ಮೇಲೆ 55 ವರ್ಷದ ರೈತನನ್ನು ಬಂಧಿಸಲಾಗಿದೆ.

ಹಿರಾ ಲಾಲ್ ಯಾದವ್ ಬಂಧಿತ ರೈತ. ಈತ ಉರ್ಮಿ ಜಲಾಶಯದಿಂದ ಸಣ್ಣ ಕಾಲುವೆ ಮೂಲಕ ನೀರನ್ನು ತನ್ನ ಜಮೀನಿಗೆ ಹಾಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಜಲಾಶಯದ ಒಂದು ಭಾಗದಲ್ಲಿ ಸಣ್ಣ ಬಿರುಕು ಉಂಟಾಗಿ ಅದರಿಂದ ನೀರು ಬರುತ್ತಿತ್ತು. ಸೋರಿಕೆಯಾಗುತ್ತಿದ್ದ ನೀರನ್ನು ತಮ್ಮ ಜಮೀನಿಗೆ ಹರಿಸಿಕೊಂಡಿದ್ದೇವೆ, ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಡಲು ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಬಂಧಿತ ರೈತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಜಲಾಶಯದ ಪೈಪ್ ಲೈನ್ ಅನ್ನು ಒಡೆದಿರುವ ಹಿರಾ ಲಾಲ್ ಆ ನೀರನ್ನು ತನ್ನ ವ್ಯವಸಾಯಕ್ಕೆ ಬಳಸಿಕೊಂಡಿದ್ದಾನೆ ಎಂದು ನೀರಾವರಿ ಇಲಾಖೆ ಜಂಟಿ ಅಭಿಯಂತರ ದೂರು ನೀಡಿದ್ದಾರೆ, ಸರ್ಕಾರದ ಆಸ್ತಿಗೆ ಹಾನಿ ಮಾಡಿರುವ ಪ್ರಕರಣದಲ್ಲಿ ಸೆಕ್ಷನ್ 430, 353 ಪ್ರಕಾರ ಆತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಸೂಪರಿಂಟೆಂಡ್ ಆಫ್ ಪೊಲೀಸ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬಂದೇಲುಖಂಡ ಸತತ ಮೂರನೇ ವರ್ಷವೂ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದೆ. 

SCROLL FOR NEXT