ದೇಶ

ಅಗಸ್ತಾ ವೆಸ್ಟ್ ಲ್ಯಾಂಡ್ ಹಗರಣ: ಹಿರಿಯ ಪತ್ರಕರ್ತರೊಬ್ಬರಿಗೆ ಇಟಲಿ ಪ್ರವಾಸಕ್ಕೆ 28 ಲಕ್ಷ ರು. ಪ್ರಾಯೋಜಕತ್ವ

Shilpa D

ನವದೆಹಲಿ: ಅಗಸ್ತಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸಂಬಂಧ ಹೊಂದಿದ್ದಾರೆಂಬ ಆರೋಪದ ಮೇಲೆ  ಹಿಂದಿ ನ್ಯೂಸ್ ಚಾನೆಲ್ ನ ಹಿರಿಯ ಪತ್ರಕರ್ತರೊಬ್ಬರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಅಗಸ್ತ ವೆಸ್ಟ್ ಲ್ಯಾಂಡ್ ಪ್ರಾಯೋಜಕತ್ವದಲ್ಲಿ ಹಿರಿಯ ಪತ್ರಕರ್ತರು ತಮ್ಮ ಪತ್ನಿಯೊಂದಿಗೆ ಇಟಲಿ ಪ್ರವಾಸ ಕೈಗೊಂಡಿರುವುದು, ಅದಕ್ಕಾಗಿ 28 ಲಕ್ಷ ರು. ಹಣ ಖರ್ಚು ಮಾಡಿರುವುದಾಗಿ ಜಾರಿ ನಿರ್ದೇಶನ ಅಧಿಕಾರಿಗಳು  ತಿಳಿಸಿರುವುದಾಗಿ ಸ್ವಾಮಿ ಆರೋಪಿಸಿದ್ದಾರೆ.
ಹೀಗಾಗಿ ಅಗಸ್ತಾ ವೆಸ್ಟ್ ಲ್ಯಾಂಡ್ ಮತ್ತು ಹಿರಿಯ ಪತ್ರಕರ್ತರ ನಡುವಿನ ಸಂಬಂಧ ಏನು ಎಂಬುದನ್ನು ತಿಳಿಯಲ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ ಕಳೆದ ವರ್ಷ ಈ ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಮತ್ತೆ ಸಮನ್ಸ್ ನೀಡಲಾಗಿದೆ. ಇನ್ನು ಮಧ್ಯವರ್ತಿ ಮೈಕೆಲ್ ಪತ್ರಕರ್ತರು ಹಾಗೂ ಹಿರಿಯ ಅಧಿಕಾರಿಗಳ ಪ್ರವಾಸಕ್ಕಾಗಿ ಸುಮಾರು 4 ಕೋಟಿ ರು. ಹಣ ಖರ್ಚು ಮಾಡಿರುವುದನ್ನು ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಹೀಗಾಗಿ ಮೊದಲು ಹಿರಿಯ ಪತ್ರಕರ್ತರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಚಾರಣೆಗೊಳಪಡಿಸಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

SCROLL FOR NEXT