ಬುದ್ಧ 
ದೇಶ

ಭಾರತದಲ್ಲಿ ಪರಿಶಿಷ್ಟ ಜಾತಿಯವರು ಬೌದ್ಧಮತದತ್ತ ಹೆಚ್ಚೆಚ್ಚು ಒಲವು ತೋರಿಸುತ್ತಿದ್ದಾರೆ

ಸರ್ಕಾರದ ಅಂಕಿ ಅಂಶಗಳ ಪ್ರಕಾರ ದಲಿತರಲ್ಲಿ ಬೌದ್ಧಮತದತ್ತ ಹೆಚ್ಚು ಒಲವು ಪ್ರಕಟವಾಗುತ್ತಿದ್ದು, ದಲಿತ ಹೋರಾಟಗಳು ಬೌದ್ಧಮತ...

ನವದೆಹಲಿ: ಭಾರತದಲ್ಲಿ ಪರಿಶಿಷ್ಟ ಜಾತಿಯವರು ಬೌದ್ಧಮತಕ್ಕೆ ಮತಾಂತರಗೊಳ್ಳಲು ಹೆಚ್ಚು ಒಲವು ತೋರಿಸುತ್ತಿದ್ದಾರಂತೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ದಲಿತರಲ್ಲಿ ಬೌದ್ಧಮತದತ್ತ ಹೆಚ್ಚು ಒಲವು ಪ್ರಕಟವಾಗುತ್ತಿದ್ದು, ದಲಿತ ಹೋರಾಟಗಳು ಬೌದ್ಧಮತ ಮೂಲಕ ಯಶ ಕಾಣುತ್ತಿವೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ. 
ಅಂಕಿ ಅಂಶಗಳ ಪ್ರಕಾರ ಬೌದ್ಧಮತಕ್ಕೆ ಮತಾಂತರಗೊಂಡ ದಲಿತರ ಸಂಖ್ಯೆ 2001ರಲ್ಲಿ 41.59 ಲಕ್ಷ ಇತ್ತು. 2011ರಲ್ಲಿ ಇದು 57. 56 ಲಕ್ಷ ಆಯಿತು. ಅಂದರೆ ಶೇ. 38ರಷ್ಟು  ಹೆಚ್ಚಳ ವಾಗಿದೆ. ಅದೇ ವೇಳೆ ಪರಿಶಿಷ್ಟ ಜಾತಿಯವರ ಜನಸಂಖ್ಯೆಯಲ್ಲಿ ಶೇ.21.3 ಹೆಚ್ಚಳವಾಗಿದ್ದು, 16.6 ಕೋಟಿಯಿದ್ದ ಜನಸಂಖ್ಯೆ 20.14 ಕೋಟಿ ಆಗಿದೆ.
ಮಹಾರಾಷ್ಟ್ರದಲ್ಲಿ ಶೇ.90 ರಷ್ಟು ಪ.ಜಾತಿಯವರು ಬೌದ್ಧಮತ ಅನುಯಾಯಿಗಳಾಗಿದ್ದು,  ಇಲ್ಲಿ 52.04 ಲಕ್ಷ ಬೌದ್ಧಮತೀಯರಿದ್ದಾರೆ. ಅದೇ ವೇಳೆ ಇಲ್ಲಿ ಶೇ. 60 ರಷ್ಟು ಬೌದ್ಧ ಮತೀಯರು ಹೆಚ್ಚಾಗಿದ್ದಾರೆ.
ಏತನ್ಮಧ್ಯೆ, 2001ರಿಂದ 2011ರ ಅವಧಿಯಲ್ಲಿ ಹಿಂದು ಪ. ಜಾತಿಯವರ ಸಂಖ್ಯೆ  15.8 ಕೋಟಿಯಿಂದ 18.9 ಕೋಟಿಯಷ್ಟು ಹೆಚ್ಚಾಗಿದ್ದು, ಇದು ಶೇ. 19.6 ರಷ್ಟು ಹೆಚ್ಚಳವಾಗಿದೆ.
ಒಟ್ಟಾರೆ ದಲಿತ ಜನಸಂಖ್ಯೆಯಲ್ಲಿ ಶೇ.83ರಷ್ಟು ಬೌದ್ಧಮತೀಯರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT