ಕೇರಳ: ರಜೆ ನೀಡುವ ವಿಷಯದಲ್ಲಿ ಬಿಎಸ್ ಎಫ್ ಇನ್ಸ್ ಪೆಕ್ಟರ್ ಹಾಗೂ ಯೋಧನ ನಡುವೆ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಕೇರಳದಲ್ಲಿ ನಡೆದಿದೆ.
ಮೇ.16 ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ರಾಜಸ್ಥಾನದ ಬಿಎಸ್ ಎಫ್ ಇನ್ಸ್ ಪೆಕ್ಟರ್ ರಾಮ್ ಗೋಪಾಲ್ ಮೀನಾ ಕೇರಳಕ್ಕೆ ಬಂದಿದ್ದರು, ಅವರೊಂದಿಗೆ ಆಗಮಿಸಿದ್ದ ಬಿಎಸ್ ಎಫ್ ಯೋಧ ಉಮೇಶ್ ಪ್ರಸಾದ್ ಸಿಂಗ್ ರಜೆಗಾಗಿ ಕೇಳಿದ್ದಾನೆ. ಈ ವಿಷಯದ ಬಗ್ಗೆ ಇಬ್ಬರ ನಡುವೆಯೂ ವಾಗ್ವಾದ ನಡೆದಿದ್ದು ರಾಮ್ ಗೋಪಾಲ್ ಮೀನಾ ಅವರನ್ನು ಉಮೇಶ್ ಪ್ರಸಾದ್ ಸಿಂಗ್ ತನ್ನ ರೈಫಲ್ ನಿಂದ ಶೂಟ್ ಮಾಡಿದ್ದಾನೆ.
ತಕ್ಷಣವೇ ಇನ್ಸ್ ಪೆಕ್ಟರ್ ನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ರಾಮ್ ಗೋಪಾಲ್ ಮೀನಾ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಕೋಯಿಕ್ಕೋಡ್ ನಲ್ಲಿ ಈ ಘಟನೆ ನಡೆದಿದ್ದು, ಚುನಾವಣಾ ಕರ್ತವ್ಯಕ್ಕಾಗಿ ಬಂದಿದ್ದ ಬಿಎಸ್ ಎಫ್ ಯೋಧರು ಸರ್ಕಾರಿ ಶಾಲೆಯೊಂದರಲ್ಲಿ ತಂಗಿದ್ದರು.