ಪಾಟ್ನಾ: ಕಾರನ್ನು ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ಅಪ್ರಾಪ್ತನನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ರಾಕಿ ಯಾದವ್ ಗೆ ಪರಿಶೀಲನೆ ನಡೆಸದೆ ಪಿಸ್ತೂಲ್ ಲೈಸೆನ್ಸ್ ಹೇಗೆ ನೀಡಲಾಯಿತು ಎಂದು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೇಂದ್ರವನ್ನು ಪ್ರಶ್ನಿಸಿದ್ದಾರೆ.
ದೆಹಲಿಯ ಪತ್ರಿಕೆಯೊಂದರಲ್ಲಿ ದೆಹಲಿ ಪೊಲೀಸರು ಪರಿಶೀಲನೆ ನಡೆಸದೆ ರಾಕಿಗೆ ಲೈಸೆನ್ಸ್ ನೀಡಿದ್ದಾರೆ ಎಂದು ವರದಿ ಪ್ರಕಟವಾಗಿದೆ. ಈ ಬಗ್ಗೆ ಯಾರು ಏಕೆ ಮಾತನಾಡುತ್ತಿಲ್ಲ. ಕೇವಲ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲಾಗುತ್ತಿದೆ. ಪರಿಶೀಲನೆ ನಡೆಸದೆ ಪಿಸ್ತೂಲ್ ಪರವಾನಗಿ ಹೇಗೆ ನೀಡಿದರು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನ ಮೇರೆಗೆ ಪರಿಶೀಲನೆ ನಡೆಸದೇ ಪಿಸ್ತೂಲ್ ಪರವಾನಗಿ ನೀಡಲಾಗಿದೆ ಎಂದ ಅವರು, ಒಂದು ವೇಳೆ ಈ ಕೆಲಸವನ್ನು ಬಿಹಾರದ ಪೊಲೀಸರು ಮಾಡಿದ್ದರೆ, ಕೇಂದ್ರ ಕೋಲಾಹಲವನ್ನೇ ಎಬ್ಬಿಸುತಿತ್ತು. ತಮ್ಮ ಹಲವಾರು ತಪ್ಪುಗಳನ್ನು ಮುಚ್ಚಿಡಲು ಬಿಹಾರದ ಸರ್ಕಾರವನ್ನು ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.