ದೇಶ

ಕೇರಳದಲ್ಲಿ ಬಿಜೆಪಿಯನ್ನು ಬಹಿಷ್ಕರಿಸಲು ಶಿವಸೇನೆ ಕರೆ

Rashmi Kasaragodu
ತಿರುವನಂತಪುರಂ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹಿಷ್ಕರಿಸಿ ಎಂದು ಶಿವಸೇನೆ ಕೇರಳದ ಮತದಾರರಿಗೆ ಕರೆ ನೀಡಿದೆ. 
ಕೇರಳವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಹೊಂದಿದ್ದರೂ, ಕೇರಳವನ್ನು ಪ್ರಧಾನಿ ನರೇಂದ್ರ ಮೋದಿ ಸೊಮಾಲಿಯಾಗೆ ಹೋಲಿಸಿದ್ದಾರೆ. ಆದ್ದರಿಂದ ಕೇರಳದ ಮತದಾರರು ಬಿಜೆಪಿಯನ್ನು ಬಹಿಷ್ಕರಿಸಬೇಕೆಂದು ಕೇರಳ ರಾಜ್ಯ ಪ್ರಮುಖ್ ಎಂಎಸ್ ಭುವನೇಂದ್ರನ್ ಹೇಳಿದ್ದಾರೆ.
ಮೋದಿಯವರು ಕೇರಳವನ್ನು ಸೊಮಾಲಿಯಾಗೆ ಹೋಲಿಸುವ ಮೂಲಕ ಕೇರಳಿಗರನ್ನು ಅವಮಾನಿಸಿದ್ದಾರೆ. ಆದ್ದರಿಂದ ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹಿಷ್ಕರಿಸಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿರುವುದಾಗಿ  ಭುವನೇಂದ್ರನ್ ತಿಳಿಸಿದ್ದಾರೆ.
ಒಂದು ವೇಳೆ ಕೇರಳಿಗರು ಬಿಜೆಪಿಯನ್ನು ಅಧಿಕಾರಕ್ಕೇರಿಸಿದರೆ ಅವರು ಶಬರಿಮಲೆ ಕ್ಷೇತ್ರದಲ್ಲಿನ ಸಂಪ್ರದಾಯಗಳಲ್ಲಿ ಬದಲಾವಣೆಯನ್ನು ತರಬಹುದು. ಅಷ್ಟೇ ಅಲ್ಲದೆ ತ್ರಿಶ್ಶೂರ್ ಪೂರಂ ಸೇರಿದಂತೆ ಇನ್ನೂ ಕೆಲವು ಆಚರಣೆಗಳನ್ನು ಬದಲಾವಣೆ ತರಬಹುದು. ಇದೆಲ್ಲವನ್ನೂ ಕೇರಳದ ಜನ ಸಾಮಾನ್ಯರು ಒಪ್ಪುವುದಿಲ್ಲ. ಆದ್ದರಿಂದ ಬಿಜೆಪಿಯನ್ನು ಬಹಿಷ್ಕರಿಸುವ ಮೂಲಕ ಕೇರಳಿಗರು ಪಾಠ ಕಲಿಸಬೇಕೆಂದು ಶಿವಸೇನೆ ಹೇಳಿದೆ.
SCROLL FOR NEXT