ತಿರುವನೆಲ್ವೆಲ್ಲಿ: ಸಹೋದರ ಹಿಂದೂ ಜಾತಿಯ ಯುವತಿಯೊಂದಿಗೆ ಪರಾರಿಯಾದ ಪರಿಣಾಮ ಯುವತಿಯ ಕುಟುಂಬದವರ ಆಕ್ರೋಶಕ್ಕೆ ಯುವಕನ ಸಹೋದರಿ ಬಲಿಯಾಗಿದ್ದಾಳೆ.
ಪದವಿ ಪಡೆದಿದ್ದ 27 ವರ್ಷದ ದಲಿತ ಮಹಿಳೆ ಕಲ್ಪನಾ ಸಾವನ್ನಪ್ಪಿದ ದುರ್ದೈವಿ. ತನ್ನ ತಮ್ಮ 25 ವರ್ಷದ ವಿಶ್ವನಾಥನ್ ಹಿಂದೂ ಜಾತಿಯ ಯುವತಿಯೊಂದಿಗೆ ಪರಾರಿಯಾಗಿದ್ದನು.
ಮೇ 3ರಿಂದ ಕಲ್ಪನಾ ಪತಿ ಸರ್ಮುಗನ್ ಮತ್ತು ಆಕೆಯ ತಮ್ಮ ವಿಶ್ವನಾಥನ್(25) ಕಾಣೆಯಾಗಿದ್ದರು. ವಿಶ್ವನಾಥನ್ ರೈಲ್ವೆ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ. ಯುವತಿಯನ್ನು ಹುಡುಕಿಕೊಂಡು ಶಂಕರನಾರಾಯಣ ಎಂಬುವವರು ಕಲ್ಪನಾ ಮನೆಗೆ ಬಂದು ವಿಚಾರಿಸಿದ್ದಾರೆ. ಆಗಲೇ, ಆಕೆಯ ಪುತ್ರಿಯೂ ಕಾಣೆಯಾಗಿರುವ ವಿಷಯ ಕಲ್ಪನಾಳಿಗೆ ತಿಳಿದಿದೆ. ನಮ್ಮ ಮಗಳನ್ನು ವಾಪಸ್ ಕಳಿಸದಿದ್ದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ತೆರಳಿದ್ದರು.
ಈ ಸಂಬಂಧ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆಯಲ್ಲಿ ಮೇ 5 ದೂರು ದಾಖಲಿಸಲಾಗಿತ್ತು. ಕೆಲವೇ ದಿನದಲ್ಲಿ ಅಪರಿಚಿತ ವ್ಯಕ್ತಿಗಳು ಮನೆಗೆ ಬಂದು ನೀರು ಕೇಳಿದ್ದಾರೆ. ಮಗುವಿನೊಂದಿಗೆ ಇದ್ದ ಕಲ್ಪನಾ ನೀರು ತರಲು ಅಡುಗೆ ಮನೆಗೆ ಹೋದಾಗ, ಒಳಗೆ ನುಗ್ಗಿದ ಕಿಡಿಗೇಡಿಗಳು ಆಕೆಯ ಮೇಲೆ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪೊಲೀಸರು ರಕ್ಷಣೆ ನೀಡಿದ್ದರೆ ನನ್ನ ಪತ್ನಿ ಸಾಯುತ್ತಿರಲಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದಾಗಿ ನನ್ನ ಪತ್ನಿ ಕೊಲೆಯಾದಳು ಎಂದು ಕಲ್ಪನಾ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಯುವತಿಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ.