ಸಾಂದರ್ಭಿಕ ಚಿತ್ರ 
ದೇಶ

ವರದಕ್ಷಿಣೆ ಕಿರುಕುಳ: ಪತ್ನಿಯ ಮೇಲೆ ಬಿಸಿ ನೀರು ಎರಚಿದ ಪತಿ

ರೆಹಾನಾ ಬೀವಿ ಎಂಬಾಕೆಗೆ ಆಕೆಯ ಪತಿ ಆಜಾದ್ ಶೇಖ್ ಈ ರೀತಿಯ ಕಿರುಕುಳ ನೀಡಿದ್ದಾನೆ. ರು. 50,000 ನಗದು ಹಣವನ್ನು ವರದಕ್ಷಿಣೆ ತರುವಂತೆ ಶೇಖ್ ...

ಕೊಲ್ಕತ್ತಾ: ವರದಕ್ಷಿಣೆ ಕಿರುಕುಳ ನೀಡಿ 21ರ ಹರೆಯದ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಮತ್ತು ಅತ್ತೆ ಬಿಸಿ ನೀರು ಎರಚಿದ ಘಟನೆ ಶುಕ್ರವಾರ ಮಾಲ್ಡಾದಲ್ಲಿ ನಡೆದಿದೆ.
ರೆಹಾನಾ ಬೀವಿ ಎಂಬಾಕೆಗೆ ಆಕೆಯ ಪತಿ ಆಜಾದ್ ಶೇಖ್ ಈ ರೀತಿಯ ಕಿರುಕುಳ ನೀಡಿದ್ದಾನೆ. ರು. 50,000 ನಗದು ಹಣವನ್ನು ವರದಕ್ಷಿಣೆ ತರುವಂತೆ ಶೇಖ್ ರೆಹಾನಳನ್ನು ಪೀಡಿಸುತ್ತಿದ್ದು, ಹಣ ಹೊಂದಿಸಲಾಗದೇ ಸೋತ ರೆಹಾನಾಳ ಮೇಲೆ ಕುದಿಯುತ್ತಿರುವ ನೀರನ್ನು ಎರಚಿದ್ದಾನೆ.
ರೆಹನಾ ದೇಹದಲ್ಲಿ ಶೇ. 70 ರಷ್ಟು ಸುಟ್ಟಗಾಯಗಳಾಗಿದ್ದು, ಈಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ರೆಹಾನಾಳಿಗೆ ಪತಿಯ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಮದುವೆಯ ವೇಳೆ   ರು. 15,000 ನಗದು, ಚಿನ್ನ ಹಾಗೂ ಇನ್ನಿತರ ವಸ್ತುಗಳನ್ನು ನೀಡಲಾಗಿತ್ತು. ಮದುವೆಯ ನಂತರವೂ ಇನ್ನಷ್ಟು ವರದಕ್ಷಿಣೆ ತರುವಂತೆ ರೆಹಾನಾಳಿಗೆ ಒತ್ತಾಯಿಸುತ್ತಿದ್ದರೆಂದು ರೆಹಾನಾಳ ಕುಟುಂಬ ಹೇಳಿದೆ.
ಐದು ವರ್ಷಗಳ ಹಿಂದೆ ರೆಹಾನಾ ಮತ್ತು ಆಜಾದ್‌ರ ಮದುವೆಯಾಗಿದ್ದು, ಈ ದಾಂಪತ್ಯದಲ್ಲಿ ಇಬ್ಬರು ಮಕ್ಕಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್