ಸೂರತ್: ವಿಶ್ವ ಹಿಂದೂ ಪರಿಷತ್(ವಿಎಚ್ ಪಿ)ನ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಸಹೋದರನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ಗುಜರಾತ್ ನಲ್ಲಿ ನಡೆದಿದೆ.
ಪ್ರವೀಣ್ ತೊಗಾಡಿಯಾ ಸಹೋದರ ಸಂಬಂಧಿಯಾದ ಭರತ್ ತೊಗಾಡಿಯಾ ಅವರನ್ನು ಅಪರಿಚಿತ ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ನ ವಿರೋಧ ಪಕ್ಷದ ಮುಖಂಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಪುಲ್ ತೊಗಾಡಿಯ ಅವರ ಸಹೋದರ ಭರತ್ ತೊಗಾಡಿಯಾ.
ನಿನ್ನೆ ರಾತ್ರಿ ಭರತ್ ತೊಗಾಡಿಯಾ ಅವರು ಮತ್ತು ಇತರ ಮೂವರ ಜತೆ ಕಚೇರಿಯಲ್ಲಿ ಇದ್ದ ವೇಳೆ ನಾಲ್ಕು ಮಂದಿ ಅಪರಿಚಿತ ವ್ಯಕ್ತಿಗಳು ಏಕಾಏಕಿ ಕಚೇರಿಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಮತ್ತೊರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.