ನವದೆಹಲಿ: ಭಾರತದ ಸೌರ ವಿದ್ಯುತ್ ಯೋಜನೆಗಾಗಿ ವಿಶ್ವ ಬ್ಯಾಂಕ್ 625 ಮಿಲಿಯನ್ ಡಾಲರ್ ಮೊತ್ತದ ಸಾಲ ಮಂಜೂರು ಮಾಡಿದೆ.
ಗ್ರಿಡ್ ಸಂಪರ್ಕ ಹೊಂದಿರುವ ಸೌರ ವಿದ್ಯುತ್ ಉತ್ಪಾದನೆ ಯೋಜನೆಗಾಗಿ ಐಎಂಎಫ್ ಹಣ ಬಿಡುಗಡೆ ಮಾಡಿದೆ. ಈ ಯೋಜನೆಯಡಿಯಲ್ಲಿ ಭಾರತದಾದ್ಯಂತ 400 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿರುವ ಗ್ರಿಡ್ ಗಳನ್ನು ಸ್ಥಾಪಿಸಲಾಗುತ್ತದೆ.
625 ಮಿಲಿಯನ್ ಡಾಲರ್ ಮೊತ್ತದೊಂದಿಗೆ ಹವಾಮಾನ ಹೂಡಿಕೆ ನಿಧಿ ಹಾಗೂ ಇತರ ಆರ್ಥಿಕ ನೆರವಿನ ಮೂಲಕ ಒಟ್ಟು 125 ಮಿಲಿಯನ್ ಡಾಲರ್ ನಷ್ಟು ಅನುದಾನವನ್ನು ಘೋಷಿಸಿದೆ. ಭಾರತ ಹೆಚ್ಚು ಸೌರ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದು ಸರ್ಕಾರಕ್ಕೆ ಐಎಂಎಫ್ ನೆರವು ನೀಡಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತರಲಿದ್ದು ಸೌರ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಹೂಡಿಕೆ ಮಾಡಲು ಸಾಲವನ್ನು ನೀಡಲಿದೆ.