ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡಿನಲ್ಲಿ ದಾಖಲೆಯ ಮಳೆ; ಆಂಧ್ರಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಭಾರೀ ಮಳೆ ನಿರೀಕ್ಷೆ

ಕರಾವಳಿ ತೀರ ದಾಟಿ ಬಾಂಗ್ಲಾದೇಶದ ಕಡೆಗೆ ಚಂಡಮಾರುತ ಬಿರುಗಾಳಿ ಹೋಗಿದೆ. ಬುಧವಾರ ತಮಿಳುನಾಡು, ಆಂಧ್ರಪ್ರದೇಶ...

ಚೆನ್ನೈ: ಕರಾವಳಿ ತೀರ ದಾಟಿ ಬಾಂಗ್ಲಾದೇಶದ ಕಡೆಗೆ ಚಂಡಮಾರುತ ಬಿರುಗಾಳಿ ಹೋಗಿದೆ. ಬುಧವಾರ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಭಾರೀ ಮಳೆಯಾಗಿದೆ.

ಮುಂದಿನ 48 ಗಂಟೆಗಳಲ್ಲಿ ತಮಿಳುನಾಡಿನತ್ತ ಭಾರೀ ಚಂಡಮಾರುತ ಬೀಸಬಹುದು ಎಂದು ಈ ಮುನ್ನ ಎಚ್ಚರಿಕೆ ನೀಡಲಾಗಿತ್ತು. ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ.

ಕಳೆದ ವರ್ಷ ನವೆಂಬರ್ ನಲ್ಲಿ ತಮಿಳುನಾಡಿನಲ್ಲಿ ಪ್ರವಾಹ ಉಂಟಾಗಿ ಭಾರೀ ಪ್ರಮಾಣದ ನಷ್ಟವುಂಟಾಗಿತ್ತು. ಇಡೀ ನಗರಕ್ಕೆ ನಗರವೇ ಮುಳುಗಡೆಯಾಗಿದ್ದು, ಸುಮಾರು 350 ಜನ ಸಾವನ್ನಪ್ಪಿದ್ದರು. ಜನರು ಸುಮಾರು ಒಂದು ತಿಂಗಳವರೆಗೆ ದಿನನಿತ್ಯದ ಜೀವನಕ್ಕೆ ಪರದಾಡಿದ್ದನ್ನು ಮರೆಯುವಂತಿಲ್ಲ. 

ಆಂಧ್ರಪ್ರದೇಶದಲ್ಲಿ ಕೂಡ ಭಾರೀ ಮಳೆ ಸುರಿಯಬಹುದೆಂದು ಊಹಿಸಲಾಗಿದೆ. ಮೀನುಗಾರರಿಗೆ ಸಮುದ್ರ ತೀರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 20 ಸೆಂಟಿ ಮೀಟರ್ ಮಳೆಯಾಗಿದೆ. ಹವಾಮಾನ ಬ್ಲಾಗ್ ಬರಹಗಾರ ಆರ್.ಪ್ರದೀಪ್ ಜಾನ್ ಎಂಬುವವರು ತಮ್ಮ ಫೇಸ್ ಬುಕ್ ಪುಟದಲ್ಲಿ, 1995ರಿಂದ ಮೇ ತಿಂಗಳಲ್ಲಿ ಇಂದು ಚೆನ್ನೈ ನಗರ ಇಷ್ಟೊಂದು ಭಾರೀ ಪ್ರಮಾಣದ ಮಳೆ ಕಂಡಿದೆ ಎಂದು ಬರೆದುಕೊಂಡಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗಿದೆ. ಚೆನ್ನೈನಿಂದ  70 ಕಿಲೋ ಮೀಟರ್ ಪೂರ್ವಕ್ಕೆ ಚಂಡಮಾರುತ ಬೀಸಿ ಆಂಧ್ರಪ್ರದೇಶ ಕರಾವಳಿ ತೀರಕ್ಕೆ ಮುಖಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಚುನಾವಣೆ ಘೋಷಣೆಯಾದ್ರೆ 25 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ ಹೊಸ ಬಾಂಬ್‌

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್‌ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!