ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭೀಕರ ಅಪಘಾತ: ಆಂಧ್ರ ಮಾಜಿ ಸಚಿವರ ಪತ್ನಿ ಸೇರಿ ಕಾರು ಚಾಲಕ ಸಾವು

ರಸ್ತೆ ಅಪಘಾತದಲ್ಲಿ ಆಂಧ್ರ ಪ್ರದೇಶದ ಕಾರ್ಪೋರೇಟಿವ್ ಬ್ಯಾಂಕ್ ನ ಛೇರ್ಮನ್ ಮತ್ತು ಮಾಜಿ ಸಚಿವ ಪಿನ್ನಾಮನೇನಿ ವೆಂಕಟೇಶ್ವರ ರಾವ್ ಅವರ ಪತ್ನಿ 52...

ಕಾರು ಅಪಘಾತದ ದೃಶ್ಯ
Vishwanath S
Updated On : 18 May 2016, 1:13 am

ಹೈದರಾಬಾದ್: ರಸ್ತೆ ಅಪಘಾತದಲ್ಲಿ ಆಂಧ್ರ ಪ್ರದೇಶದ ಕಾರ್ಪೋರೇಟಿವ್ ಬ್ಯಾಂಕ್ ನ ಛೇರ್ಮನ್ ಮತ್ತು ಮಾಜಿ ಸಚಿವ ಪಿನ್ನಾಮನೇನಿ ವೆಂಕಟೇಶ್ವರ ರಾವ್ ಅವರ ಪತ್ನಿ 52 ವರ್ಷದ ಸತ್ಯವಾಣಿ ಮತ್ತು ಕಾರಿನ ಚಾಲಕ ಮೃತಪಟ್ಟಿದ್ದಾರೆ.

ಟಿಡಿಪಿ ಮಾಜಿ ಸಚಿವ ವೆಂಕಟೇಶ್ವರ ರಾವ್ ಪತ್ನಿ ಸತ್ಯವಾಣಿ ಹಾಗೂ ಕಾರು ಚಾಲಕ ಹೈದರಾಬಾದ್ ನಿಂದ ವಿಜಯವಾಡಗೆ ಎಸ್ಯುವಿ ಕಾರಿನಲ್ಲಿ ಮರಳುತ್ತಿದ್ದ ವೇಳೆ ಸೋಮವಾರ ರಾತ್ರಿ 11.50 ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ವೆಂಕಟೇಶ್ವರ ರಾವ್ ಅವರು ಗಂಭೀರ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಪತ್ನಿ ಹಾಗೂ ಕಾರು ಚಾಲಕ ಸೌಮ್ಯ ದಾಸು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೈದರಾಬಾದ್ ನಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಮಾಜಿ ಸಚಿವರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕ ಹಾಗೂ ಪತ್ನಿ ಸೀಟ್ ಬೆಲ್ಟ್ ಧರಿಸದೇ ಇದ್ದಿದ್ದರಿಂದ ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ವರ ರಾವ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನೀಡಿ ಬಳಿಕ ಕಾರ್ಪೋರೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement