ನವದೆಹಲಿ: ಕೇರಳದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಅನುಯಾಯಿಯೊಬ್ಬರು ಮುಸ್ಲಿಮರು ಜಿಹಾದ್‌ಗಾಗಿ ತಮ್ಮನ್ನು ಅರ್ಪಿಸಬೇಕು ಇಲ್ಲವೇ ಮುಸ್ಲಿಂ ಧರ್ಮವನ್ನು ತೊರೆಯಬೇಕೆಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಬ್ಲಾಗ್‌ನಲ್ಲಿ ಇಸಿಸ್ ಮುಖ್ಯಸ್ಥ ಅಬು ಬಕ್‌ರ್ ಅಲ್ ಬಾಗ್ದಾದಿಗೆ ಬೆಂಬಲ ಸೂಚಿಸಿರುವ ಈ ವ್ಯಕ್ತಿ, ಭಾರತದ ಸಂವಿಧಾನವನ್ನು ಅನುಸರಿಸಬೇಡಿ ಎಂದು ಮುಸ್ಲಿಂ ಜನತೆ ಆಜ್ಞಾಪಿಸಿದ್ದಾರೆ. ಅದೇ ವೇಳೆ ಈ ವ್ಯಕ್ತಿ ಫೇಸ್ ಬುಕ್ ಗ್ರೂಪ್ ನಲ್ಲಿ ಒಬ್ಬರಿಗೆ ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂಬ ಆರೋಪವಿದೆ.
ಜಿಹಾದ್‌ಗೆ ದಾರಿ ತೋರಿಸುತ್ತೇವೆ ಎಂದು ಲೇಖನ ಬರೆದಿರುವ ಬ್ಲಾಗ್ ಪೋಸ್ಟ್ blogmuhajir2015.wordpress.com ಎಂಬ ಬ್ಲಾಗ್‌ನಲ್ಲಿ ಈ ತಿಂಗಳಾರಂಭದಲ್ಲಿ ಪ್ರಕಟವಾಗಿತ್ತು.
ಈ ಲೇಖನ ಬರೆದ ಬ್ಲಾಗರ್‌ಗಾಗಿ ಕೇರಳ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಈವರೆಗೆ ಈತ ಪತ್ತೆಯಾಗಲಿಲ್ಲ.