ದೇಶ

ಉತ್ತರ ಭಾರತದಲ್ಲಿ ಏರಿದ ತಾಪಮಾನ: 50 ಡಿಗ್ರಿ ಉಷ್ಣಾಂಶ ದಾಖಲು

Shilpa D

ನವದೆಹಲಿ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗಿದೆ. ವಿವಿಧ ರಾಜ್ಯಗಳಲ್ಲಿ 50 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ.

ನವದೆಹಲಿ, ರಾಜಸ್ತಾನ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ತಾಪಮಾನ ತೀವ್ರ ಗತಿಯಲ್ಲಿ ಏರುತ್ತಿದ್ದು, ಬುಧವಾರ ರಾಜ್ಯದ ಬಹುತೇಕ ಕಡೆ ದಾಖಲೆ ಉಷ್ಣಾಂಶ ದಾಖಲಾಗಿದೆ. ಹರಿಯಾಣದ ಹಿಸಾರ್​ನಲ್ಲಿ ಅತ್ಯಧಿಕ ಎಂದರೆ 46 ಡಿಗ್ರಿ ಸೆಲ್ಸಿಯಸ್, ಕರ್ನಲ್​ನಲ್ಲಿ 43.8, ಅಂಬಾಲಾ ಮತ್ತು ಚಂಡಿಗಢ ದಲ್ಲಿ 43 ಡಿ.ಸೆ. ತಾಪಮಾನವಿದ್ದು, ಜನತೆ ತೀವ್ರ ಸೆಕೆ ಅನುಭವಿಸುತ್ತಿದ್ದಾರೆ.

ಅಮೃತಸರದಲ್ಲಿ 45, ಲೂಧಿಯಾನಾದಲ್ಲಿ 44, ಪಟಿಯಾಲಾದಲ್ಲಿ 44.4. ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ವರ್ಷದ ಅತ್ಯಧಿಕ ಉಷ್ಣಾಂಶ ಎನ್ನಲಾಗಿದೆ.ಮುಂದಿನ ಎರಡು ದಿನಗಳಲ್ಲಿ ಎರಡೂ ರಾಜ್ಯಗಳಲ್ಲಿ ಇದೇ ರೀತಿ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

SCROLL FOR NEXT