ಸಾಂದರ್ಭಿಕ ಚಿತ್ರ 
ದೇಶ

ಆಂಧ್ರ, ಒಡಿಸ್ಸಾದಲ್ಲಿ 'ರೋನು'ಅಬ್ಬರ : ಮುಂಜಾಗ್ರತೆ ವಹಿಸಲು ಹವಾಮಾನ ಇಲಾಖೆ ಸೂಚನೆ

ಮುಂದಿನ 48 ಗಂಟೆಗಳಲ್ಲಿ ಗಂಟೆಗೆ 80 ಕಿ.ಮೀ.ವೇಗದಲ್ಲಿ ಬಿರುಗಾಳಿ ಜತೆ ಕುಂಭದ್ರೋಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ...

ಭುವನೇಶ್ವರ್: ದೇಶದ ಪೂರ್ವ ಕರಾವಳಿಯಲ್ಲಿ  ರೋನು ಚಂಡಮಾರುತ ಆರ್ಭಟಿಸುತ್ತಿದ್ದು, ಒಡಿಶಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳಲ್ಲಿ ಗಂಟೆಗೆ 80 ಕಿ.ಮೀ.ವೇಗದಲ್ಲಿ ಬಿರುಗಾಳಿ ಜತೆ ಕುಂಭದ್ರೋಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ ಒಡಿಶಾ, ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಕಟ್ಟೆಚ್ಚರ ಘೋಷಿಸಿವೆ. ಪೂರ್ವ ಕರಾವಳಿಗೆ ಗಿ ಹೋಗುವ ರೋನು ಚಂಡಮಾರುತ ಮೇ 21ರ ರಾತ್ರಿ ಬಾಂಗ್ಲಾ ದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.

ಚಂಡ ಮಾರುತವು ತೀರದ ಸನಿಹದಲ್ಲೇ ಸಾಗುತ್ತಿರುವುದರಿಂದ ಪೂರ್ವ ತೀರದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳಲ್ಲಿ ಈಗಾಗಲೇ ಧಾರಾಕಾರ ಮಳೆಯಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲೂ ಕಾರ್ಮೋಡ ಆವರಿಸಿದೆ. ಬಿರುಗಾಳಿ ಸಹಿತ ಮಳೆ ಇನ್ನೆರಡು ದಿನಗಳ ಸುರಿಯಲಿದೆ ಎಂದು ಹೇಳಲಾಗಿದೆ.

ಇನ್ನು ಚಂಡಮಾರುತ ಭೀತಿ ಎದುರಿಸುತ್ತಿರುವ ಒಡಿಸ್ಸಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಅಗತ್ಯವಾದ ಆಹಾರ ಗಳನ್ನು ಶೇಖರಿಸುವಂತೆ ಸೂಚನೆ ನೀಡಿದ್ದಾರೆ. ಶಾಲೆಗಳಿಗೆ ಇನ್ನೂ ಬೇಸಿಗೆ ರಜೆ ಇರುವುದರಿಂದ ಸೂರು ಕಳೆದುಕೊಂಡವರಿಗೆ ಶಾಲೆಗಳಲ್ಲಿ ಸೂರು ಒದಗಿಸುವಂತೆ ತಿಳಿಸಿದ್ದಾರೆ.

ಬಿರುಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ರಕ್ಷಿಸಿಕೊಳ್ಳಲು ಎಲ್ಲ ಅಗತ್ಯಕ್ರಮ ಕೈಗೊಳ್ಳುವಂತೆ ತೀರ ಪ್ರದೇಶಗಳ ಜನರಿಗೆ ಆಡಳಿತ ಸೂಚನೆ ನೀಡಿದೆ. ಮೀನುಗಾರಿಕೆಗೆ ಸಮುದ್ರಕ್ಕಿಳಿಯದಂತೆ ಬೆಸ್ತರಿಗೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!