ಪುದುಚೇರಿಯ 11 ಶಾಸಕರ ವಿರುದ್ಧ ಕ್ರಿಮಿಕನಲ್ ಕೇಸ್, 25 ಮಂದಿ ಕೋಟ್ಯಾಧಿಪತಿಗಳು
ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪುದುಚೇರಿ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರ ಪೈಕಿ 11 ಮಂದಿಯ ವಿರುದ್ಧ ಕ್ರಿಮಿನಲ್...
ಪುದುಚೇರಿ: ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪುದುಚೇರಿ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರ ಪೈಕಿ 11 ಮಂದಿಯ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಘ(ಎಡಿಆರ್) ಸಮೀಕ್ಷೆ ಹೇಳಿದೆ.
ಪುದುಚೇರಿಯ ಒಟ್ಟು 30 ಶಾಸಕರ ಪೈಕಿ ನಾಲ್ವರ ವಿರದ್ಧ ಕೊಲೆ. ಕೊಲೆ ಯತ್ನ, ಕಳ್ಳತನ ಹಾಗೂ ಭ್ರಷ್ಟಾಚಾರ ಪ್ರಕರಣಗಳಿವೆ ಎಂದು ಎಡಿಆರ್ ಹೇಳಿದೆ.
ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ 11 ಶಾಸಕರ ಪೈಕಿ ಕಾಂಗ್ರೆಸ್ ನ ಐದು, ಎಐಎನ್ಆರ್ ಸಿಯ ಮೂವರು, ಡಿಎಂಕೆ ಇಬ್ಬರು ಹಾಗೂ ಎಐಎಡಿಎಂಕೆಯ ಒಬ್ಬ ಶಾಸಕರಿದ್ದಾರೆ.
ಇನ್ನು 30 ಶಾಸಕರ ಪೈಕಿ 25 ಶಾಸಕರು ಕೋಟ್ಯಾಧಿಪತಿಗಳಾಗಿದ್ದು, ಐಎಎನ್ಆರ್ ಸಿಯ ಅಶೋಕ್ ಆನಂದ್(124 ಕೋಟಿ) ಅತ್ಯಂತ ಶ್ರೀಮಂತ ಶಾಸಕರಾಗಿದ್ದರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.