ಪ್ರಪಾತಕ್ಕೆ ಉರುಳಿದ ವಾಹನ (ಪಿಟಿಐ ಚಿತ್ರ) 
ದೇಶ

ಅರುಣಾಚಲ ಪ್ರದೇಶದಲ್ಲಿ ಕಣಿವೆಗೆ ವಾಹನ ಉರುಳಿ 17 ಜನರ ಸಾವು

ಅರುಣಾಚಲ ಪ್ರದೇಶದಲ್ಲಿ ಪ್ರಯಾಣಿಕ ಬಸ್ ವೊಂದು ಕಣಿವೆಗೆ ಉರುಳಿದ ಪರಿಣಾಮ 17 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ...

ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಪ್ರಯಾಣಿಕ ಬಸ್ ವೊಂದು ಕಣಿವೆಗೆ ಉರುಳಿದ ಪರಿಣಾಮ 17 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಅರುಣಾಚಲ ಪ್ರದೇಶದ  ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ  ಈ ದುರ್ಘಟನೆ ಸಂಭವಿಸಿದ್ದು, ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ರೂಪ ಕಲಕ್​ತಾಂಗ್ ರಸ್ತೆಯಲ್ಲಿ ತೆರಳುತ್ತಿದ್ದ ವಾಹನ  ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ. ಕೆಸರಿನಿಂದ ಕೂಡಿದ್ದ ರಸ್ತೆಯಿಂದ ವಾಹನ ಕೆಳಗೆ ಜಾರಿ ಪ್ರಪಾತಕ್ಕೆ ಬಿದ್ದಿದೆ. ಘಟನೆಯಸ್ಸಿ 17 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ  ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅರುಣಾಲಪ್ರದೇಶದ ಇಂಧನ ಸಚಿವ ಟಿ.ಎನ್.ತಂಗಧೋಕ್ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ  ವೀಕ್ಷಿಸುತ್ತಿದ್ದಾರೆ.

ಅಲ್ಲದೆ ಖುದ್ದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದು, ಸರ್ಕಾರದಿಂದ ಅಗತ್ಯ ನೆರವು ನೀಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ರಾಜ್ಯಕ್ಕೆ 3,705 ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..!

ಪೇಸ್‌ಮೇಕರ್‌ ಅಳವಡಿಕೆ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಡಿಸ್‌ಚಾರ್ಜ್

Karur stampede: ನಟ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Karnataka Rains- ಬೆಂಗಳೂರು ಸೇರಿ ರಾಜ್ಯಾದ್ಯಂತ ಅ.9ರವರೆಗೆ ಮಳೆ

SCROLL FOR NEXT