ಮುಂಬೈ: ಕ್ಯಾನ್ಸರ್ ಪೀಡಿತ ಬಾಲಕಿ ಹಾರ್ದಿಕಾಗೆ ತನ್ನ ಜೀವನದಲ್ಲಿ ಒಂದು ಬಾರಿಯಾದರೂ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಬೇಕೆಂಬ ಆಸೆಯಿತ್ತು. ಈ ಆಸೆಯನ್ನು ಅರಿತ ಬಿಗ್ ಬಿ, ಹಾರ್ದಿಕಾಳ ಹುಟ್ಟುಹಬ್ಬದಂದು ಆಕೆಯನ್ನು ಭೇಟಿ ಮಾಡಿ, ಆಕೆಯೊಂದಿಗೆ ಕೆಲ ಕ್ಷಣಗಳನ್ನು ಕಳೆದಿದ್ದಾರೆ.
ಹಾರ್ದಿಕಾಳಿಂದ ಬರ್ತ್‌ಡೇ ಕೇಕ್ ಕಟ್ ಮಾಡಿಸಿ, ಆಕೆಗೆ ಹೂಗುಚ್ಛ ನೀಡಿದ ಬಿಗ್ ಬಿ ಹಾರ್ದಿಕಾಳಿಗೆ ಶುಭ ಹಾರೈಸಿದ್ದಾರೆ.
ಹಾರ್ದಿಕಾಳ ಹುಟ್ಟುಹಬ್ಬದ ಆಚರಣೆಯ ಫೋಟೋವನ್ನು ಕೂಡಾ ಬಿಗ್ ಬಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.