ದೇಶ

ನೀಟ್ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ

Sumana Upadhyaya

ನವದೆಹಲಿ: ದೇಶಾದ್ಯಂತ ಏಕರೂಪವಾಗಿ ನಡೆಸುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ವ್ಯಾಪ್ತಿಯಿಂದ ಈ ವರ್ಷದ ಮಟ್ಟಿಗೆ ರಾಜ್ಯಗಳನ್ನು ಹೊರಗಿಡುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಂಗಳವಾರ ಒಪ್ಪಿಗೆ ನೀಡಿದ್ದಾರೆ. ಅವರು ಇಂದು 4 ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೂ ಮುನ್ನ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ. ಕಳೆದ ಶನಿವಾರ ಕೇಂದ್ರ ಸರ್ಕಾರದ ಆದೇಶವನ್ನು ರಾಷ್ಟ್ರಪತಿಯವರ ಬಳಿ ಕಳುಹಿಸಿಕೊಡಲಾಗಿತ್ತು.

ಸುಗ್ರೀವಾಜ್ಞೆ ಹೊರಡಿಸುವ ಅಗತ್ಯತ ಬಗ್ಗೆ ವಿವರಿಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ನಿನ್ನೆ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಇನ್ನಷ್ಟು ಮಾಹಿತಿ ಕೊಡುವಂತೆ ಕೋರಿದ್ದರು. ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರಪತಿಯವರೊಂದಿಗೆ ಮಾತುಕತೆ ನಡೆಸಿದ ಸಚಿವರು ರಾಜ್ಯಗಳ ಪ್ರವೇಶ ಪರೀಕ್ಷೆಗಷ್ಟೇ ವಿದ್ಯಾರ್ಥಿಗಳು ತಯಾರಾಗಿರುವುದರಿಂದ ನೀಟ್ ಗೆ ಸಿದ್ದತೆ ನಡೆಸಿಲ್ಲ, ಪಠ್ಯಕ್ರಮದಲ್ಲಿನ ವ್ಯತ್ಯಾಸ, ಭಾಷಾ ಸಮಸ್ಯೆ ಮುಂತಾದ ವಿಚಾರಗಳನ್ನು ನಡ್ಡಾ ವಿವರಿಸಿದರು ಎಂದು ತಿಳಿದು ಬಂದಿದೆ.

ನೀಟ್ ಸುಗ್ರೀವಾಜ್ಞೆಗೆ ಸಂಬಂಧಪಟ್ಟಂತೆ ಇರುವ ವಿವಾದಾತ್ಮಕ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಆರೋಗ್ಯ ಸಚಿವಾಲಯವು ಯಾವ ನಿಲುವು ತಳೆಯಲಿದೆ ಎಂಬುದರ ಬಗ್ಗೆ ಹೆಚ್ಚುವರಿ ಮಾಹಿತಿ ನೀಡುವಂತೆ ರಾಷ್ಟ್ರಪತಿ ಕೇಳಿದ್ದಾರೆ.

ಸುಗ್ರೀವಾಜ್ಞೆ ಜಾರಿಗೆ ಬಂದರೆ ಅದು ರಾಜ್ಯ ಸರ್ಕಾರದ ಸೀಟುಗಳಿಗೆ ಮಾತ್ರವಲ್ಲ, ವಿವಿಧ ರಾಜ್ಯಗಳಿಗೆ ಮೀಸಲಾಗಿರುವ ಶೇಕಡಾ 12ರಿಂದ 15ರಷ್ಟು ಸೀಟುಗಳಿಗೂ ಅನ್ವಯವಾಗಲಿದೆ. ವಿದ್ಯಾರ್ಥಿಗಳಿಗೆ ಹೊರಗಿನ ರಾಜ್ಯಗಳಲ್ಲಿ ಕಲಿಯುವ ಅವಕಾಶ ಒದಗಿಸುವುದಕ್ಕಾಗಿ ಈ ಸೀಟುಗಳನ್ನು ಮೀಸಲು ಇರಿಸಲಾಗುತ್ತದೆ.

SCROLL FOR NEXT