ದೇಶ

ಮದ್ಯ ಸೇವನೆಯಿಂದ ಭಾರತದಲ್ಲಿ ಪ್ರತಿದಿನ 15 ಜನರ ಸಾವು!

Srinivas Rao BV

ಭಾರತದಲ್ಲಿ ಮದ್ಯ ನಿಷೇಧ ವಿಧಿಸುವುದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರಬೇಕಾದರೆ ಮದ್ಯ ಸೇವನೆಯಿಂದ ಸಾವನ್ನಪ್ಪುತ್ತಿರುವವರ ಬಗ್ಗೆ ಸಂಶೋಧನಾ ವರದಿಯೊಂದು ಪ್ರಕಟವಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯವರದಿಯ ಪ್ರಕಾರ ಮದ್ಯ ಸೇವನೆಯಿಂದ ಭಾರತದಲ್ಲಿ ಪ್ರತಿದಿನ( ಪ್ರತಿ 96) ಗಂಟೆಗಳಲ್ಲಿ 15 ಜನರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದುಬಂದಿದೆ. 2003 ರಿಂದ 12 ವರೆಗೆ ಭಾರತದಾದ್ಯಂತ ಮದ್ಯ ಸೇವನೆ ಶೇ.38 ರಷ್ಟು ಏರಿಕೆಯಾಗಿದ್ದು ಈ ಪೈಕಿ ಶೇ.11 ರಷ್ಟು ಜನರು ಅತಿ ಹೆಚ್ಚು ಮದ್ಯವ್ಯಸನಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮದ್ಯ ನಿಷೇಧಕ್ಕೆ ರಾಜಕೀಯ ಬೆಂಬಲ ಸಿಗುತ್ತಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಮದ್ಯ ಸೇವನೆ ಆರೋಗ್ಯದ ಸಮಸ್ಯೆ ಎಂದು ಪರಿಗಣಿಸಲಾಗಿದೆಯಾದರು ನೈತಿಕ ಸಮಸ್ಯೆ ಎಂದು ಗುರುತಿಸಲಾಗಿಲ್ಲ. ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದ ನಂತರ ತಮಿಳುನಾಡು ಸಿಎಂ ಜಯಲಲಿತಾ ಸಹ ರಾಜ್ಯದಲ್ಲಿ 500 ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.
ಮದ್ಯ ಸೇವನೆಯಿಂದ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ ಎಂದು ವರದಿ ಮೂಲಕ ತಿಳಿದುಬಂದಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳು ಸ್ಥಾನ ಪಡೆದಿವೆ. 

SCROLL FOR NEXT