ಮರಾಠವಾಡ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದಿಂದ ನೊಂದು 28ರ ಹರೆಯದ ಮಹಿಳೆ ತನ್ನ ಮೂವರು ಮಕ್ಕಳನ್ನು ಬಾವಿಗೆಸೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಇಲ್ಲಿನ ನಂದೇದ್ ಜಿಲ್ಲೆಯ ಬೆಟ್‌ಸವಾಂಗಿ ಗ್ರಾಮ ನಿವಾಸಿಯಾದ ಪ್ರಿಯಾಂಕಾ ಬಾಲಾದಿ ಎಂಬಾಕೆ 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಾಂಪತ್ಯದಲ್ಲಿ ಈಕೆಗೆ ಪ್ರತೀಕ್ (3), ಕಪಿಲ್ (5) ಮತ್ತು ಸಾಕ್ಷಿ (7) ಎಂಬ ಮೂರು ಮಕ್ಕಳಿದ್ದಾರೆ. ಸೋಮವಾರ ಪ್ರಿಯಾಂಕಾ ಈ ಮೂವರ ಮಕ್ಕಳನ್ನು ಬಾವಿಗೆಸೆದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅತ್ತೆ ಮನೆಯಲ್ಲಿ ರು. 1 ಲಕ್ಷ ವರದಕ್ಷಿಣೆ ತರಬೇಕೆಂದು ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಕಾರಣ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಿಯಾಂಕಾಳ ಸಹೋದರ ದೂರಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾಳ ಪತಿ ಬಾಲಾಜಿ ವಾಂಖೆಡೆ, ಮಾವ ಗಣ್‌ಪತ್ ವಾಂಖೆಡೆ ಮತ್ತು ಅತ್ತೆ ಲೀಲಾವತಿ ವಾಂಖೆಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics