ನವದೆಹಲಿ: 5 ನಿಮಿಷಗಳಲ್ಲಿ ಎನ್ ಡಿ ಎ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕೇಳುವ 20 ಪ್ರಶ್ನೆಗಳಿಗೆ ಉತ್ತರಿಸಿದರೇ ಸಾಕು ನೀವು ಪ್ರಧಾನಿಯನ್ನು ಭೇಟಿ ಮಾಡಿ ಅವರಿಂದ ಸಹಿ ಮಾಡಲ್ಪಟ್ಟ ಒಂದು ಪ್ರಮಾಣ ಪತ್ರವನ್ನು ಪಡೆಯಬಹುದು.
ಮೈಗವ್ ಯೋ ಪೋರ್ಟಲ್ ನಲ್ಲಿ ಸರ್ಕಾರಿ ಕ್ವಿಜ್ ನೀಡಲಾಗಿದ್ದು, ಅದರಲ್ಲಿ ಜನರಿಗೆ ಎನ್ ಡಿ ಎ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಎಷ್ಟು ಅರಿವಿದೆ ಎಂಬುದರ ಬಗ್ಗೆ ಪ್ರಶ್ನಿಸಲಾಗುವುದು.
ಒಟ್ಟು 20 ಪ್ರಶ್ನೆಗಳನ್ನು ಕೇಳಲಾಗುವುದು. ಒಬ್ಬರಿಗೆ ಕೇಳಿದ ಪ್ರಶ್ನೆಯನ್ನೇ ಮತ್ತೊಬ್ಬರಿಗೆ ಕೇಳುವ ಸಾಧ್ಯತೆ ಕಡಿಮೆ.
ಪ್ರತಿಯೊಬ್ಬ ಸ್ಪರ್ದಿಗೂ ಒಂದೊಂದು ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಲಾಗುವುದು. ಅದರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ. ಜೊತೆಗೆ ಯಾರ್ಯಾರಿಗೆ ಎಷ್ಟು ಅಂಕ ದೊರೆತಿಗೆ ಎಂಬುದನ್ನು ತಿಳಿಸುವ ಸ್ಕೋರ್ ಕಾರ್ಡ್ ಸಹ ನೀಡಲಾಗುವುದು.
ಹೆಚ್ಚಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರನ್ನು, ಅತೀ ಕಡಿಮೆ ಅವಧಿಯಲ್ಲಿ ಉತ್ತರ ನೀಡಿದವರನ್ನು ವಿಜೇತರನ್ನಾಗಿ ಘೋಷಿಸಲಾಗುವುದು.