ದೇಶ

ತಂದೆಯನ್ನು ಪ್ರಧಾನಿಯಾಗುವುದರಿಂದ ತಡೆದಿದ್ದ ಚಂದ್ರಬಾಬು ನಾಯ್ಡು ಪುತ್ರ!

Srinivas Rao BV

ತಿರುಪತಿ: 1990 ರಲ್ಲಿ ತೃತೀಯ ರಂಗದ ನಾಯಕರು ಚಂದ್ರಬಾಬು ನಾಯ್ಡು ಅವರನ್ನು ಪ್ರಧಾನಿಯಾಗುವಂತೆ ಆಹ್ವಾನ ನೀಡಿದಾಗ ಸ್ವತಃ ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಪ್ರಧಾನಿಯಾಗುವುದನ್ನು ತಪ್ಪಿಸಿದ್ದರಂತೆ.

ಈ ವಿಷಯವನ್ನು ಸ್ವತಃ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ತೆಲುಗು ದೇಶಂ ಪಕ್ಷದ ಮಹಾನಾಡು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಚಂದ್ರಬಾಬು ನಾಯ್ಡು ಹಳೆಯ ದಿನಗಳನ್ನು ಮೆಲುಕು ಹಾಕಿದ್ದು ತಮ್ಮ ಮಗನೇ ತಮ್ಮನ್ನು ಪ್ರಧಾನಿಯನ್ನಾಗುವುದರಿಂದ ತಪ್ಪಿಸಿದ ಎಂದು ಹೇಳಿದ್ದಾರೆ.

1990 ರಲ್ಲಿ ತೃತೀಯ ರಂಗದ ನಾಯಕರು ತಮ್ಮನ್ನು ಪ್ರಧಾನಿಯಾಗುವಂತೆ ಒತ್ತಾಯಿಸಿದ್ದರು. ಆದರೆ ಅದೊಂದು ತಾತ್ಕಾಲಿಕ ಸರ್ಕಾರವಾಗುವ ಸಾಧ್ಯತೆ ಇದ್ದಿದ್ದರಿಂದ ಪ್ರಧಾನಿ ಹುದ್ದೆಯೂ ತಾತ್ಕಾಲಿಕವಾಗಲಿದೆ ಎಂದು 10 ನೇ ತರಗತಿ ಓದುತ್ತಿದ್ದ ನಾರಾ ಲೋಕೇಶ್ ಎಚ್ಚರಿಸಿದ್ದರು ಎಂದು ಚಂದ್ರಬಾಬು ನಾಯ್ಡು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ತಮ್ಮ ತಂದೆಗೆ ಸಲಹೆ ನೀಡಿದ್ದ ನಾರಾ ಲೋಕೇಶ್, ಇಂದು ಟಿಡಿಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.

SCROLL FOR NEXT