ದೇಶ

ದಲಿತರ ಜೊತೆ ಭೋಜನ: ಅಮಿತ್ ಷಾ ಜಾತಿ ತಾರತಮ್ಯ ಮಾಡುತ್ತಿದ್ದಾರೆ- ಅಖಿಲೇಶ್

Sumana Upadhyaya

ಲಕ್ನೋ: ವಾರಣಾಸಿಯಲ್ಲಿ ದಲಿತ ಕುಟುಂಬದವರ ಜೊತೆ ಭೋಜನ ಸವಿಯುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕ್ರಮವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಅಮಿತ್ ಶಾ ಅವರು ಜಾತಿ ತಾರತಮ್ಯ ಮಾಡುತ್ತಿದ್ದು, ಮುಂದಿನ ವರ್ಷದ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು ದಲಿತರನ್ನು ಓಲೈಸಲು ಹೊರಟಿದ್ದಾರೆ ಎಂದು ಅವರು ಹೇಳಿದ್ದಾರೆ.

ತಮ್ಮ ಪಕ್ಷ ರಾಜ್ಯದಲ್ಲಿ ಮಾಡಿರುವ ಕೆಲಸ, ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಮತಯಾಚನೆ ಮಾಡುತ್ತದೆ. ಇತ್ತೀಚೆಗೆ ನಾನು ಕೂಡ ಕಾರ್ಮಿಕರೊಂದಿಗೆ ಭೋಜನ ಸವಿದಿದ್ದೆ. ಆದರೆ ಜಾತಿಯಾಧಾರದಲ್ಲಿ ತಾರತಮ್ಯ ಮಾಡಿಲ್ಲ. ನಿಮ್ಮಲ್ಲಿ ಭಾವಚಿತ್ರವಿದ್ದರೆ ನೀವು ಕಂಡುಹಿಡಿಯಿರಿ, ಅಂದು ನನ್ನ ಪಕ್ಕ ಕುಳಿತು ಭೋಜನ ಸವಿದ ಕಾರ್ಮಿಕರು ಯಾವ ಜಾತಿಗೆ ಸೇರಿದವರೆಂದು ಎಂದು ಸುದ್ದಿಗಾರರಲ್ಲಿ ಮಾತನಾಡುತ್ತಾ ಹೇಳಿದರು.

ಅಂದು ನನ್ನ ಜೊತೆ ಕುಳಿತು ಊಟ ಮಾಡಿದ ಕಾರ್ಮಿಕರು ಮಿನರಲ್ ನೀರು ಕುಡಿಯುವುದು, ಮಟನ್, ಚಿಕನ್ ತಿನ್ನುವುದನ್ನು ತೋರಿಸಿದ್ದಕ್ಕೆ ಮಾಧ್ಯಮದವರಿಗೆ ಧನ್ಯವಾದಗಳು. ಜಾತಿ, ಮತದ ಆಧಾರದಲ್ಲಿ ನಾವು ವಿಷಯಗಳನ್ನು ನೋಡುವುದಿಲ್ಲ. ಕೆಲಸ, ಸಾಧನೆಯಿಂದ ಜನರ ಮನಸ್ಸನ್ನು ಗೆಲ್ಲಬೇಕು ಎಂದು ಅಖಿಲೇಶ್ ಯಾದವ್ ಹೇಳಿದರು.

ಅಮಿತ್ ಶಾ ಇಂದು, ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ದಲಿತರಾದ ಗಿರಿಜಾ ಪ್ರಸಾದ್ ಬಿಂದ್ ಮತ್ತು ಇಕ್ಬಾಲ್ ಬಿಂದ್ ಅವರ ಮನೆಯಲ್ಲಿ ಭೋಜನ ಸವಿಯಲಿದ್ದಾರೆ.

SCROLL FOR NEXT