ಮುಂಬೈ: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು ಒಟ್ಟು ಆಸ್ತಿ ರು.95 ಕೋಟಿ.
ನಿನ್ನೆ ಚಿದಂಬರಂ ಅವರು ಮಹಾರಾಷ್ಟ್ರದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ರು.95 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಚಿದಂಬರಂ ಅವರು ಸಲ್ಲಿಸಿರುವ 22 ಪುಟಗಳ ಅಫಿಡವಿಟ್ ನಲ್ಲಿ ತಾವು, ಪತ್ನಿ ಹಾಗೂ ಕುಟುಂಬದವರು ಹೊಂದಿರುವ ಆಸ್ತಿ ಬಗ್ಗೆ ವಿವರ ನೀಡಿದ್ದಾರೆ.ಕುಟುಂಬದ ಬಳಿ ರು.54.30 ಕೋಟಿ ಮೌಲ್ಯದ ಚರಾಸ್ತಿ ಮತ್ತು ರು.41.35 ಮೌಲ್ಯದ ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ.
2014-15ನೇ ಸಾಲಿನಲ್ಲಿ ರು.8.58 ಕೋಟಿ ಆದಾಯ ಗಳಿಸಿದ್ದು. ಇದೇ ಅವಧಿಯಲ್ಲಿ ನನ್ನ ಪತ್ನಿ ರು.1.25 ಕೋಟಿ ಆದಾಯ ಗಳಿಸಿದ್ದಾರೆ. ಚಿದಂಬರಂ ಬಳಿ ಚರಾಸ್ತಿ ರು.42.95 ಕೋಟಿ, ಸ್ಥಿರಾಸ್ತಿ ರು.4.25 ಕೋಟಿ ಇದ್ದು, ನಳಿನಿ ಅವರ ಬಳಿ ರು.11.23 ಕೋಟಿ ಚರಾಸ್ತಿ ಮತ್ತು ರು.25.03 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಅಫಿಡವಿಡ್ ನಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಕೈಯಲ್ಲಿ ರು.3.50 ಲಕ್ಷ ಹಣವಿದ್ದು, ಪತ್ನಿಯ ಬಳಿ ರು.1.24 ಲಕ್ಷ ಹಣವಿದೆ. ವಿವಿಧ ಬ್ಯಾಂಕ್ ನ 13 ಬ್ರಾಂಚ್ ಗಳಲ್ಲಿ ಅಕೌಂಟ್ ಹೊಂದಿದ್ದು, ಚೆನ್ನೈ, ನವದೆಹಲಿ, ಕರ್ನಾಟಕದಲ್ಲಿ ಬ್ಯಾಂಕ್ ಖಾತೆಗಳಿವೆ. ನಳಿನಿ ಅವರು ವಿವಿಧ ಸ್ಥಳಗಳಲ್ಲಿ ಆರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.
ಚಿದಂಬರಂ ಬಳಿ ರು.87.232 ಬೆಲೆಯ 32 ಗ್ರಾಂ ಚಿನ್ನ, ರು.97.500 ಬೆಲೆಯ 3.25 ಕ್ಯಾರೆಟ್ ಡೈಮೆಂಡ್ ಇದ್ದು, ನಳಿನಿ ಬಳಿ ರು.39.17 ಲಕ್ಷ ಮೌಲ್ಯದ 1.43 ಕೆಜಿ ಚಿನ್ನ, 52 ಕೆಜಿ ಬೆಳ್ಳಿ ಮತ್ತು 22.98 ಲಕ್ಷ ಮೌಲ್ಯದ 76.61 ಕ್ಯಾರೆಟ್ ಡೈಮಂಡ್ ಇದೆ. ಒಂದು ಹೋಂಡಾ ಮತ್ತು ಸ್ಕೋಡಾ ಕಾರು ಇದ್ದು, ಪತ್ನಿಯ ಬಳಿ ಟಯೋಟಾ ಕಂಪನಿಯ ಇನ್ನೋವಾ ಕಾರು ಇದೆ.
1994ರಲ್ಲಿ ಚಿದಂಬರಂ ಕರ್ನಾಟಕದಲ್ಲಿ ರು.25.16 ಲಕ್ಷ ನೀಡಿ 38.72 ಎಕರೆ ಜಮೀನನ್ನು ಖರೀದಿಸಿದ್ದು, ಅದನ್ನು ಅಭಿವೃದ್ಧಿಗೊಳಿಸಲಾಗಿದೆ. ಪ್ರಸ್ತುತ ಅದರ ಮೌಲ್ಯ ರು.1.93 ಕೋಟಿ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics