ದೇಶ

ಅಮೇಜಾನ್ ಗೋಡನ್ ನಲ್ಲಿ ರು.10 ಲಕ್ಷ ಮೌಲ್ಯದ ಮೊಬೈಲ್ ಕಳವು

Mainashree
ಥಾಣೆ: ಆನ್ ಲೈನ್ ಜನಪ್ರಿಯ ಮಾರುಕಟ್ಟೆಯಲ್ಲಿ ಒಂದಾದ ಅಮೆಜಾನ್ ಗೋಡನ್ ನಲ್ಲಿ ರು.10.37 ಲಕ್ಷ ಮೌಲ್ಯದ ಮೊಬೈಲ್ ಗಳು ಕಾಣೆಯಾಗಿದೆ ಎಂದು ವರದಿಯಾಗಿದೆ. 
ಮೇ 22ರಂದು ಅಮೇಜಾನ್ ಕಂಪನಿ ಪೊಲೀಸ್ ಠಾಣೆಯಲ್ಲಿ ಕಳವು ಸಂಬಂಧ ದೂರು ದಾಖಲಿಸಿದೆ. ಗುತ್ತಿಗೆದಾರ ನೌಕರರು 17 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಗೋಡನ್ ನಿಂದ ಕಳವು ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ. 
ಪದ್ಗಾ ವ್ಯಾಪ್ತಿಯಲ್ಲಿ ಬರುವ ಕರುಂಡ್ ಹಳ್ಳಿಯಲ್ಲಿ ಅಮೇಜಾನ್ ಗೋಡನ್ ಇದ್ದು, ಐವರು ನೌಕರರು ಕಳವು ಮಾಡಿದ್ದಾರೆಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 381ರಡಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT