ದೇಶ

ಶಸ್ತ್ರಾಸ್ತ್ರಗಳ ಡೀಲರ್ ಸಂಜಯ್ ಭಂಡಾರಿ ಆಪ್ತರ ಬಗ್ಗೆ ಮತ್ತಷ್ಟು ಹೊಸ ಮಾಹಿತಿ ಬಹಿರಂಗ

Srinivas Rao BV

ನವದೆಹಲಿ: ಶಸ್ತ್ರಾಸ್ತ್ರಗಳ ಡೀಲರ್ ಸಂಜಯ್ ಭಂಡಾರಿ ವಿರುದ್ಧದ ತನಿಖೆ ಆಳಕ್ಕೆ ಹೋದಷ್ಟು ಹೊಸ ವಿಷಯಗಳು ಬಹಿರಂಗವಾಗುತ್ತಿದ್ದು, ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಎರಡು ರಕ್ಷಣಾ ವ್ಯವಹಾರಗಳ ಪೈಕಿ ಕನಿಷ್ಠ ಎರಡು ವ್ಯವಹಾರಗಳಲ್ಲಿ ಸಂಜಯ್ ಭಂಡಾರಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.
ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರ ಅವರೊಂದಿಗೆ ವ್ಯಾವಹಾರಿಕ ಸಬಂಧ ಹೊಂದಿರುವ ಸಂಜಯ್ ಭಂಡಾರಿ ವಿರುದ್ಧ ಈಗ ಸುಮಾರು 4,000 ಕೋಟಿ ಡಾಲರ್ ಮೊತ್ತದ ಭಾರತೀಯ ವಾಯು ಸೇನೆಯಾ ಬೇಸಿಕ್ ಟ್ರೇನರ್ ವಿಮಾನ( ಪ್ರಾಥಮಿಕ ತರಬೇತಿಗಾಗಿ ಬಳಸುವ ವಿಮಾನ) ಖರೀದಿ ವ್ಯವಹಾರದಲ್ಲಿ ಹಾಗೂ ಸಾವಿರಾರು ಕೋಟಿ ರೂ ಮೌಲ್ಯದ ಮಿರಾಜ್ ಅಪ್ ಗ್ರೇಡ್ ಪ್ರೋಗ್ರಾಮ್ ನಲ್ಲೂ ಭಂಡಾರಿ ಶಾಮೀಲಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
   
ಭಂಡಾರಿ ನಡೆಸುತ್ತಿದ್ದ ಮೂರು ಕಂಪನಿಗಳು ತೆರಿಗೆ ವಂಚನೆ ಮಾಡುವುದರ ಬಗ್ಗೆ ತನಿಖೆ ನಡೆಸುವುದು ಮುಖ್ಯ ಉದ್ದೇಶವಾಗಿದ್ದು, ಭಂಡಾರಿ ನೇತೃತ್ವದ ಮೊದಲ ಕಂಪನಿ ಬಗ್ಗೆ ಜಾರಿ ನಿರ್ದೇಶನಾಲಯ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಸಂಜಯ್ ಭಂಡಾರಿ ನಡೆಸುತ್ತಿದ್ದ ಎರಡನೇ ಕಂಪನಿ ಆಫ್ ಸೆಟ್ ಇಂಡಿಯಾ ಸೊಲ್ಯೂಷನ್ಸ್ ಪ್ರೈ.ಲಿ ಕಂಪನಿ ವಿದೇಶಿ ರಕ್ಷಣಾ ಸಂಸ್ಥೆಗಳಿಗೆ ಅಗತ್ಯತೆಯನ್ನು ಪೂರೈಸುವ ಕೆಲಸ ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ. ಇನ್ನು ಭಂಡಾರಿ ನೇತೃತ್ವದ ಮೂರನೇ ಕಂಪನಿ ವಿರುದ್ಧ ಅಕ್ರಮ ಹಣವರ್ಗಾವಣೆ ಆರೋಪ ಕೇಳಿಬಂದಿದ್ದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇನ್ನು ಸಂಜಯ್ ಭಂಡಾರಿ ಶೆಲ್ ಕಂಪನಿ ಸ್ಕೈಲೈನ್ ನ ದೀಪಕ್ ಅಗರ್ವಾಲ್ ಅವರೊಂದಿಗೂ ಸಂಬಂಧ ಹೊಂದಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ. ಶೆಲ್ ಕಂಪನಿಯ ದೀಪಕ್ ಅಗರ್ವಾಲ್, ಕಳೆದ ವರ್ಷ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಗೆ 2 ಕೋಟಿ ದೇಣಿಗೆ ನೀಡಿ ಸುದ್ದಿಯಲ್ಲಿತ್ತು.
ಇನ್ನು ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ವಿರುದ್ಧವೂ ಸಂಜಯ್ ಭಂಡಾರಿ ಅವರೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿದೆ. ಆದರೆ ಸಿದ್ಧಾರ್ಥ್ ನಾಥ್ ಸಿಂಗ್ ಆರೋಪವನ್ನು ನಿರಾಕರಿಸಿದ್ದು, ಕೇವಲ ಸಾಮಾಜಿಕ ವಲಯದಲ್ಲಿ ಮಾತ್ರ ಸಂಜಯ್ ಭಂಡಾರಿ ನನಗೆ ಪರಿಚಯ  ವ್ಯಾವಹಾರಿಕ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

SCROLL FOR NEXT