ದೇಶ

ರಾಜಸ್ತಾನ: 5 ಸಾವಿರ ಕೋಟಿ ರೂಪಾಯಿ ಮೊತ್ತದ ಮಾಂಡ್ರಾಕ್ಸ್ ಮಾದಕ ದ್ರವ್ಯ ವಶ

Sumana Upadhyaya
ಉದಯ್ ಪುರ/ ನವದೆಹಲಿ: ರಾಜಸ್ತಾನದ ಉದಯ್ ಪುರದಲ್ಲಿ 23.5 ಮೆಟ್ರಿಕ್ ಟನ್ ಗಳಷ್ಟು ಮಂದ್ರಾಕ್ಸ್ ಮಾತ್ರೆಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ ಅಧ್ಯಕ್ಷ ನಸೀಬ್ ಶಾ, ಮೊಸಂಬಿಕ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಮಾರಾಟ ಮಾಡುವ ಮಾದಕದ್ರವ್ಯಗಳು ಮತ್ತು ಸೈಕೊಟ್ರೋಫಿಕ್ ವಸ್ತುಗಳು ಇವು ಆಗಿವೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 5 ಸಾವಿರ ಕೋಟಿ ರೂಪಾಯಿ ಬೆಲೆಬಾಳುವ ಮಾದಕದ್ರವ್ಯ ಇದಾಗಿದ್ದು, ಉದಯ್ ಪುರದ ಔಷಧೀಯ ಕಾರ್ಖಾನೆ ಮತ್ತು ಎರಡು ಗೋದಾಮುಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಯಿತು. ಒಂದು ಕೆಜಿ ಮೆಂಡ್ರಾಕ್ಸ್ ಸುಮಾರು 20 ಲಕ್ಷ ರೂಪಾಯಿ ಬೆಲೆಬಾಳುತ್ತದೆ.
ರಾಜಸ್ತಾನ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಅಕ್ರಮವಾಗಿ ಔಷಧಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ಅಲ್ಲಿಂದ ಅಮೆರಿಕಾ, ಯುರೋಪ್ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಮಾದಕದ್ರವ್ಯಗಳು ಮಾರಾಟವಾಗುತ್ತವೆ. ಭಾರತದಲ್ಲಿ ಇದರ ಒಂದು ಮಾತ್ರೆ ತಯಾರಿಕೆಗೆ ಕೆಲವು ರೂಪಾಯಿಗಳು ಮಾತ್ರ ವೆಚ್ಚವಾದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಮಾತ್ರೆಗೆ 150 ರೂಪಾಯಿಯಾಗುತ್ತದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.
SCROLL FOR NEXT