'ಲಾರಂಗ್ ಗಾರ್ ಆಶ್ರಮ ಧ್ವಂಸಕ್ಕೆ ಆದೇಶ ನೀಡಿರುವ ಚೀನಾದಿಂದ ಟಿಬೆಟ್ ಮೇಲೆ ಧಾರ್ಮಿಕ ದಬ್ಬಾಳಿಕೆ'
ಟಿಬೆಟ್ ನಲ್ಲಿರುವ ಬೌದ್ಧರ ಧಾರ್ಮಿಕ ಕೇಂದ್ರ ಲಾರಂಗ್ ಗಾರ್ ಆಶ್ರಮವನ್ನು ನಾಶ ಮಾಡಲು ಆದೇಶ ನೀಡುವ ಮೂಲಕ ಚೀನಾ ಧಾರ್ಮಿಕ ದಬ್ಬಾಳಿಕೆ ನಡೆಸುತ್ತಿದೆ...
ಪಣಜಿ: ಟಿಬೆಟ್ ನಲ್ಲಿರುವ ಬೌದ್ಧರ ಧಾರ್ಮಿಕ ಕೇಂದ್ರ ಲಾರಂಗ್ ಗಾರ್ ಆಶ್ರಮವನ್ನು ನಾಶ ಮಾಡಲು ಆದೇಶ ನೀಡುವ ಮೂಲಕ ಚೀನಾ ಧಾರ್ಮಿಕ ದಬ್ಬಾಳಿಕೆ ನಡೆಸುತ್ತಿದೆ ಎಂದು ಟಿಬೆಟ್ನ್ನರ ದೇಶಾಂತರ ಸರ್ಕಾರದ ಪ್ರಧಾನಿ ಲೊಬ್ಸಾಂಗ್ ಸಾಂಗೆ ಆರೋಪಿಸಿದ್ದಾರೆ.
ಚೀನಾ ಸರ್ಕಾರ ಟಿಬೆಟ್ ಜನರ ಹಕ್ಕುಗಳನ್ನು ಗೌರವಿಸಬೇಕು, ಟಿಬೆಟಿಯನ್ನರ ಮೂಲಭೂತ ಹಕ್ಕುಗಳನ್ನು ಪುನರ್ಸ್ಥಾಪಿಸಬೇಕು ಎಂದು ಲೊಬ್ಸಾಂಗ್ ಸಾಂಗೆ ಕರೆ ನೀಡಿದ್ದಾರೆ. ಗೋವಾದಲ್ಲಿ ನಡೆದ ಇಂಡಿಯಾ ಐಡಿಯಾಸ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಟಿಬೆಟ್ ನ ಪ್ರಧಾನಿ, " ಚೀನಾ ವಿಶ್ವ ಪ್ರಸಿದ್ಧ ಲಾರಂಗ್ ಗಾರ್ ಆಶ್ರಮವನ್ನು ನಾಶ ಮಾಡಲು ಆದೇಶ ನೀಡಿದೆ. ಚೀನಾದ ಧಾರ್ಮಿಕ ದಬ್ಬಾಳಿಕೆ ಕೊನೆಗೊಳ್ಳಬೇಕು, ಚೀನಾದಲ್ಲಿ ಹೆಚ್ಚಿನ ಬೌದ್ಧರು ಇರುವ ಕಾರಣ ಭಾರತ- ಚೀನಾದ ನಡುವೆ ಸೌಹಾರ್ದಯುತವಾದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ದ್ವಿಪಕ್ಷೀಯ ಸಂಬಂಧ ಇರಬೇಕು ಎಂದು ಟಿಬೆಟ್ ಪ್ರಧಾನಿ ಸಾಂಗೆ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮೇಕ್ ಇನ್ ಇಂಡಿಯಾ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾಂಗೆ, ಮೇಕ್ ಇನ್ ಇಂಡಿಯಾ ಮೂಲಕ ಭಾರತೀಯರೂ ಸಹ ಉತ್ಪಾದನೆ ಮಾಡುವಂತಾಗಿದೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.