ಜಯವಂತಿಬೆನ್ ಮೆಹ್ತಾ(ಸಂಗ್ರಹ ಚಿತ್ರ)
ಮುಂಬೈ: 1996ರಿಂದ 1999ರವರೆಗೆ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಸಚಿವೆಯಾಗಿದ್ದ ಜಯವಂತಿಬೆನ್ ಮೆಹ್ತಾ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಬಿಜೆಪಿ ಪಕ್ಷದಲ್ಲಿ ಅವರು ಕಾರ್ಪೊರೇಟರ್, ಶಾಸಕ ಮತ್ತು ಸಂಸದರಾಗಿದ್ದರು. ಅವರು ದಿವಂಗತ ಮುರಳಿ ದಿಯೋರಾ ಅವರನ್ನು ದಕ್ಷಿಣ ಮುಂಬೈ ಕ್ಷೇತ್ರದಿಂದ ಸೋಲಿಸಿದ್ದರು.
ಜಯವಂತಿಬೆನ್ ಮೆಹ್ತಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅವರನ್ನು ತಳಮಟ್ಟದಿಂದ ಕೆಲಸ ಮಾಡುವ ನಾಯಕಿ ಎಂದು ಬಣ್ಣಿಸಿದ್ದಾರೆ. ಜಯವಂತಿಬೆನ್ ಬಿಜೆಪಿ-ಜನಸಂಘದ ಜನ ಸಮೂಹದ ನಾಯಕಿಯಾಗಿದ್ದು, ಸಾರ್ವಜನಿಕ ಸೇವೆಯಲ್ಲಿ ನಾಯಕತ್ವ ಗುಣಗಳನ್ನು ಕಲಿಸಿದ್ದರು ಎಂದು ಬಿಜೆಪಿ ಸಂಸದ ಕಿರಿತ್ ಸೋಮಯ್ಯ ಹೇಳಿದ್ದಾರೆ.
ಮುಂಬೈಯ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಇಂದು ಸಾಯಂಕಾಲ 5.30ರ ವೇಳೆಗೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮಹಾರಾಷ್ಟ್ರ ರಾಜ್ಯ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ ತಿಳಿಸಿದ್ದಾರೆ.
ಜಯವಂತಿಬೆನ್ ವಾಜಪೇಯಿ ಸರ್ಕಾರದಲ್ಲಿ ಇಂಧನ ಖಾತೆ ರಾಜ್ಯ ಸಚಿವರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics