ದೇಶ

ಡೊನಾಲ್ಡ್ ಟ್ರಂಪ್ ಅಮೆರಿಕದ ಮುಂದಿನ ಅಧ್ಯಕ್ಷ: ಇದು ಚಾಣಕ್ಯನ ಭವಿಷ್ಯ!

Srinivas Rao BV
ಚೆನ್ನೈ: ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕದ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಚೆನ್ನೈ ನಲ್ಲಿರುವ ಚಾಣಕ್ಯ ಎಂಬ ಹೆಸರಿನ ಮೀನು ಭವಿಷ್ಯ ನುಡಿದಿದೆ. 
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಭಾವಚಿತ್ರಗಳನ್ನು ಅಕ್ವೇರಿಯಂ ಒಳಗೆ ಕಳಿಸಲಾಗಿದ್ದು, ಚಾಣಕ್ಯ ಮೀನು ಡೊನಾಲ್ಡ್ ಟ್ರಂಪ್ ಮುಂದಿನ ಅಮೆರಿಕ ಅಧ್ಯಕ್ಷ ಎಂದು ಭವಿಷ್ಯ ನುಡಿದಿದೆ. 
ಚಾಣಕ್ಯ ಮೀನು ಈ ಹಿಂದೆಯೂ ಹಲವು ಭವಿಷ್ಯಗಳನ್ನು ಸೂಚಿಸಿದ್ದು, ವಿಶ್ವಕಪ್ ಫುಟ್ ಬಾಲ್ ನಲ್ಲಿ ಎಲ್ಲಾ 8  ಪಂದ್ಯಗಳ ಭವಿಷ್ಯವನ್ನೂ ನಿಖರವಾಗಿ ಹೇಳಿತ್ತು. ಆದರೆ ಕ್ರಿಕೆಟ್ ನಲ್ಲಿ ಮಾತ್ರ ಭಾರತದ ಗೆಲುವಿನ ಬಗ್ಗೆ ಚಾಣಕ್ಯನ ಭವಿಷ್ಯ ಸುಳ್ಳಾಗಿತ್ತು.
ಸೊಳ್ಳೆಗಳು ಹಾಗೂ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಈ ಮೀನು ಭವಿಷ್ಯ ನುಡಿದಿದ್ದು, ಭವಿಷ್ಯ ತಿಳಿಯಲು ಬರುವ ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ವಿಶ್ವಕಪ್ ಫುಟ್ ಬಾಲ್, ಕ್ರಿಕೆಟ್ ವೇಳೆಯಲ್ಲೂ ಇಂತಹ ಭವಿಷ್ಯ ತಿಳಿಯಲು ಬರುವ ಜನರಲ್ಲಿ ಹೆಚ್ಐವಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕ ಹರಿಹರನ್.  
SCROLL FOR NEXT