ತಿರುವನಂತಪುರಂ: ಸಾರ್ಕ್ ಸದಸ್ಯರಿಗೆ ಉಪಯೋಗವಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ಭಾರತದ ಮಹಾತ್ವಾಕಾಂಕ್ಷಿ ದಕ್ಷಿಣ ಏಷ್ಯಾ ಉಪಗ್ರಹ ಮುಂದಿನ ಮಾರ್ಚ್ ವೇಳೆಗೆ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ.
ಉಪಗ್ರಹ ಮುಂದಿನ ತಿಂಗಳು ಡಿಸೆಂಬರ್ ಗೆ ಉಡಾವಣೆಗೊಳ್ಳಬೇಕಿತ್ತು. ಅದು ಮುಂದಿನ ಮಾರ್ಚ್ ಗೆ ಮುಂದೂಡಲಾಗಿದೆ. 2014ರಲ್ಲಿ ನೇಪಾಳಕ್ಕೆ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಪ್ರಧಾನಿ ಮೋದಿ, ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಅನೇಕ ಕ್ಷೇತ್ರಗಳಲ್ಲಿ ನೆರವಾಗಲು ಸಾರ್ಕ್ ಸ್ಯಾಟಲೈಟ್ ನ್ನು ಭಾರತ ಉಡುಗೊರೆಯಾಗಿ ನೀಡಲಿದೆ ಎಂದು ಘೋಷಿಸಿದ್ದರು. ಈ ಉಪಗ್ರಹದಿಂದ ಟೆಲಿ ಕಮ್ಯುನಿಕೇಷನ್, ಟೆಲಿ ಮೆಡಿಸಿನ್ ಮೊದಲಾದವುಗಳಿಗೆ ನೆರವಾಗಲಿದೆ.
ಜಿಎಸ್ಎಲ್ ವಿ ಮಾರ್ಕ್ 3 ಡಿಸೆಂಬರ್ ನಲ್ಲಿ ಉಡಾವಣೆಗೊಳ್ಳುವ ನಿರೀಕ್ಷೆಯಿದ್ದು, ಅದಕ್ಕಾಗಿ ತಯಾರಿ ಭರದಿಂದ ಸಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.