ನವದೆಹಲಿ: ಭ್ರಷ್ಟಾಚಾರ ಮುಕ್ತ ಭಾರತ ಮಾಡುವುದಕ್ಕಾಗಿಯೇ ರು.500 ಹಾಗೂ 1,000 ನೋಟು ಬಂದ್ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.
ಕಪ್ಪುಹಣ ಹಾಗೂ ಭ್ರಷ್ಟಾಚಾರ ಕುರಿತಂತೆ ಕೇಂದ್ರ ಸರ್ಕಾರದ ಕಠಿಣ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜಕೀಯ ವಲಯ, ಕ್ರೀಡಾ ವಲಯ, ಸಿನಿಮಾ ಕ್ಷೇತ್ರಗಳಿಂದ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಶುಭಾಶಯ ಕೋರಿದ ಜನತೆಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಉತ್ತಮ ಭಾರತಕ್ಕಾಗಿ ಪ್ರಾಮಾಣಿಕರಾಗಿರುವ ಜನತೆಯ ಹಿತಾಸಕ್ತಿಗಾಗಿಯೇ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಲಾಯಿತು. ಮುಂದಿನ ಜನಾಂಗಕ್ಕಾಗಿ ಭಾರತವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವಾಗಿ ನಿರ್ಮಾಣ ಮಾಡಬೇಕಿದೆ. ಕಠಿಣ ನಿರ್ಧಾರದಿಂದ ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳನ್ನು ಪತ್ತೆಹಚ್ಚಬಹುದಾಗಿದೆ ಎಂದು ಹೇಳಿದ್ದಾರೆ.