ಯುಟಿಲಿಟಿ ಸೇವೆಗಳ ಬಿಲ್ ಪಾವತಿಗೆ ನ.11 ರ ಮಧ್ಯ ರಾತ್ರಿ ವರೆಗೆ 500, 1000 ರೂ ನೋಟುಗಳನ್ನು ನೀಡಬಹುದು
ನವದೆಹಲಿ: ಯುಟಿಲಿಟಿ ಸೇವೆಗಳಾದ ನೀರು, ವಿದ್ಯುತ್, ಫೋನ್ ಮುಂತಾದವುಗಳ ಶುಲ್ಕ ಪಾವತಿಗೆ ನ.11 ರ ಮಧ್ಯರಾತ್ರಿವರೆಗೆ 500, 1000 ರೂಗಳ ನೋಟುಗಳನ್ನೇ ನೀಡಬಹುದು ಎಂದು ಕೇಂದ್ರ ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.
ನ.11 ರ ಮಧ್ಯರಾತ್ರಿ ವರೆಗೆ ಪಾವತಿ ಮಾಡುವ 500, 1000 ರೂ ನೋಟುಗಳ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಶುಲ್ಕ ಪಾವತಿ, ತೆರಿಗೆ, ಸ್ಥಳೀಯ ಸಂಸ್ಥೆ, ನಗರಸಭೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪಾವತಿ ಮಾಡಬೇಕಿರುವ ದಂಡದ ಶುಲ್ಕ ಸೇರಿದಂತೆ ಯುಟಿಲಿಟಿ ಶುಲ್ಕಗಳನ್ನು ಪಾವತಿ ಮಾಡಲು 500, 1000 ರೂಗಳ ನೋಟನ್ನು ಬಳಸಬಹುದು ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಇದಕ್ಕೂ ಮುನ್ನ ನೋಟುಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಫಾರ್ಮಸಿ, ಆಸ್ಪತ್ರೆ, ರೈಲ್ವೆ ಟಿಕೆಟ್ ಕಾಯ್ದಿರಿಸುವುದಕ್ಕೆ 500, 1000 ರೂಗಳನ್ನು ಬಳಕೆ ಮಾಡಬಹುದು ಎಂದು ಸರ್ಕಾರ ತಿಳಿಸಿತ್ತು.