ದೇಶ

ಮೋದಿ ಜಪಾನ್ ಪ್ರವಾಸ ಆರಂಭ: ಮಹತ್ವದ ಒಪ್ಪಂದಗಳಿಗೆ ಸಹಿ ಸಾಧ್ಯತೆ

Manjula VN

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲದ ಜಪಾನ್ ಪ್ರವಾಸ ಗುರುವಾರದಿಂದ ಆರಂಭವಾಗಿದ್ದು, ಉಭಯ ದೇಶಗಳು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಅಪಾರ ನಿರೀಕ್ಷೆಗಳೊಂದಿಗೆ ಮೋದಿಯವರು ಇದೇ ಮೊದಲ ಬಾರಿಗೆ ಜಪಾನ್ ಗೆ ಭೇಟಿ ನೀಡುತ್ತಿದ್ದು, ತಂತ್ರಜ್ಞಾನ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಒಡಂಬಡಿಕೆಗಳಿಗೆ ಸಹಿ ಹಾಕಲಿದ್ದಾರೆ.

ಜಪಾನ್ ಗೆ ತೆರಳುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿಯವರು, ನಾನು ಮತ್ತು ಜಪಾನ್ ರಾಷ್ಟ್ರದ ಅಧಿಕಾರಿಗಳು ಒಟ್ಟಿಗೆ ಶಿನ್ಕಾನ್ಸೇನ್ ಬುಲೆಟ್ ರೈಲಿನಲ್ಲಿ ಕೊಬೆಗೆ ತೆರಳಲಿದ್ದೇವೆ. ಇದೇ ರೈಲಿನ ತಂತ್ರಜ್ಞಾನವನ್ನು ಮುಂಬೈ-ಅಹಮದಾಬಾದ್ ನ ಹೈಸ್ಪೀಡ್ ರೈಲಿಗೂ ಅಳವಡಿಸಲಾಗುತ್ತದೆ. ಕೈಗಾರಿಕೆಯಲ್ಲಿ ಸಾಕಷ್ಟು ಮುಂದುವರೆದಿರುವ ಹಾಗೂ ಸಕಲ ಸೌಕರ್ಯಗಳನ್ನು ಹೊಂದಿರುವುದಂತರ ಕೊಬೆಯ ಕವಾಸಕಿಗೂ ಭೇಟಿ ನೀಡಲಿದ್ದೇನೆಂದು ಹೇಳಿದ್ದಾರೆ.

ಹೈಸ್ಪೀಡ್ ರೈಲು ಕುರಿತ ಸಹಕಾರ ಹಾಗೂ ಒಪ್ಪಂದಗಳು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ವ್ಯಾಪಾರ, ವ್ಯವಹಾರ ಹಾಗೂ ಬಂಡವಾಳ ಕುರಿತ ಒಪ್ಪಂದಗಳನ್ನು ಉತ್ತೇಜಿಸುತ್ತದೆ. ಭಾರತದಲ್ಲಿ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಯ ನಿರೀಕ್ಷೆಯಂತೆಯೇ ದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಾಗುತ್ತದೆ ಎಂದಿದ್ದಾರೆ.

SCROLL FOR NEXT