ಅಹ್ಮದ್ ನಗರ: ಕೇಂದ್ರ ಸರ್ಕಾರ 500 ಮತ್ತು 1000 ರು ನೋಟುಗಳನ್ನು ನಿಷೇಧಗೊಳಿಸಿದ್ದು ಕ್ರಾಂತಿಕಾರಿ ಹೆಜ್ಜೆ ಎಂದು ಹೇಳಿರುವ ಹೋರಾಟಗಾರ ಅಣ್ಣಾ ಹಜಾರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ಕಪ್ಪು ಹಣದ ಮೇಲೆ ನಿಯಂತ್ರಣ ಸಾಧ್ಯವಾಗಿದೆ, ಹೊಸ ಭಾರತ ಭ್ರಷ್ಟಾಚಾರ ಮುಕ್ತ ಸಮಾಜದೆಡೆಗೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಚುನಾವಣೆಯಲ್ಲು ಸುಧಾರಣೆ ತರಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಾಂತಿ ಕಾರಿ ಹೆಜ್ಜೆಯಿಂದಾಗಿ ಕಪ್ಪು ಹಣ, ಭ್ರಷ್ಟಾಚಾರ, ಹಾಗೂ ಭಯೋತ್ಪಾದನೆಗೆ ಲಗಾಮು ಬೀಳಲಿದೆ, ಹಿಂದಿನ ಸರ್ಕಾರಗಳು ಕಪ್ಪು ಹಣ ನಿಯಂತ್ರಿಸಲು ಇಚ್ಛಾಶಕ್ತಿ ತೋರಿರಲಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.