ದೇಶ

ಚಿಕಿತ್ಸೆಗೆಂದು ಭಾರತಕ್ಕೆ ಬಂದ ಬಾಂಗ್ಲಾದೇಶಿಗರಿಗೆ ತಟ್ಟಿತು ನೋಟ್ ಬಂದ್ ಬಿಸಿ

Srinivas Rao BV
ಭಾರತದಲ್ಲಿ ಚಿಕಿತ್ಸೆ ಪಡೆಯಲು ಭಾರತಕ್ಕೆ ಆಗಮಿಸಿದ್ದ ನೂರಾರು ಬಾಂಗ್ಲಾದೇಶಿ ನಾಗರಿಕರಿಗೆ 500, 1000 ರೂ ನೋಟುಗಳ ರದ್ದತಿ ಬಿಸಿ ತಟ್ಟಿದೆ. 
ಬಾಂಗ್ಲಾದೇಶದಿಂದ ಬಂದು ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ನಾಗರಿಕರು ಹಾಗೂ ಚಿಕಿತ್ಸೆ ಪಡೆಯಲು ಭಾರತಕ್ಕೆ ಬಂದಿರುವವರು ಬಾಂಗ್ಲಾ ಕರೆನ್ಸಿಯನ್ನು ಭಾರತದ ಕರೆನ್ಸಿಗೆ ಬದಲಾಯಿಸಿಕೊಳ್ಳುವ ವೇಳೆ ಗರಿಷ್ಟ ಮುಖಬೆಲೆಯ 500, 1000 ರೂ ನೋಟುಗಳ ಪಡೆದುಕೊಂಡಿದ್ದಾರೆ, ಆದರೆ ಚಿಕಿತ್ಸೆಗಾಗಿ ಬಂದವರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮದ ಬಿಸಿ ತಟ್ಟಿದೆ.  
ರೋಗಿಗಳನ್ನು ದಾಖಲಿಸಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ 500, 1000 ರೂಗಳ ನೋಟುಗಳನ್ನು ಸ್ವೀಕರಿಸಲಾಗುತ್ತಿಲ್ಲ ಎಂದು ಕೋಲ್ಕತಾಗೆ ಬಂದಿರುವ ಬಾಂಗ್ಲಾದೇಶ ಜನರು ಹೇಳಿದ್ದಾರೆ.  ಆಸ್ಪತ್ರೆಯಲ್ಲಿ ಕೇವಲ 100 ರೂಪಾಯಿಗಳನ್ನು ಪಡೆಯಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಬಳಿ ಇರುವುದು ಕೆಲವೇ ಕೆಲವು 100 ರ ನೋಟುಗಳು ಎಂದು ಆಸ್ಪತ್ರೆಗೆ ದಾಖಲಾಗಿರುವವರ ಸಂಬಂಧಿಕರೊಬ್ಬರು ಹೇಳಿದ್ದಾರೆ. 
ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯೊಬ್ಬರು ಕಿಮೋಥೆರೆಪಿಗೆ ಒಳಗಾಗಬೇಕಿದ್ದು, ಆಸ್ಪತ್ರೆಗಳಲ್ಲಿ 500, 1000 ರೂ ನೋಟುಗಳನ್ನು ಸ್ವೀಕರಿಸಲಾಗುತ್ತಿಲ್ಲ. 100 ರೂ ನೋಟುಗಳನ್ನೇ ನೀಡಬೇಕೆಂದರೆ ನಾನು ಚಿಕಿತ್ಸೆ ಪಡೆಯದೇ  ವಾಪಸ್ ತೆರಳಬೇಕಾಗುತ್ತದೆ ಎಂದು ಚಿಕಿತ್ಸೆಪಡೆಯುತ್ತಿರುವವರೊಬ್ಬರು ಹೇಳಿದ್ದಾರೆ. 
SCROLL FOR NEXT