ಹರ್ದೋಯಿ: ಟ್ರಾಕ್ಟರ್ ಪಲ್ಟಿಯಾಗಿ ನಾಲ್ವರು ಯಾತ್ರಾರ್ಥಿಗಳು ಮೃತಪಟ್ಟಿರುವ ಹಾಗೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಸದಾರ್ಪುರ ಪ್ರದೇಶದಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಪವಿತ್ರಾ ಗಂಗಾ ಸ್ನಾನಕ್ಕಾಗಿ ರಾಜಘಾಟ್ ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಬಿಲ್ ಗ್ರಾಂ ಪೊಲೀಸ್ ಠಾಣೆಯ ಎಸ್ ಪಿ ರಾಜೀವ್ ಮಲ್ಲೋತ್ರಾ ಅವರು ಹೇಳಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಯಾತ್ರಾರ್ಥಿಗಳನ್ನು ಹರಿಪಾಲ್(40), ಮಾಲ್ತಿ(50), ರೋಹಿತ್(10), ಹಾಗೂ ಸರ್ವೇಶ್(30) ಎಂದು ಗುರುತಿಸಲಾಗಿದೆ ಹಾಗೂ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತರೆಲ್ಲರೂ ಬೆಣಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸಂದನ ಬರೋಲಿ ಗ್ರಾಮದ ನಿವಾಸಿಗಳಾಗಿದ್ದಾರೆ.