ದೇಶ

ಸಂಕಷ್ಟಕ್ಕೆ ಪರಿಹಾರ ಬೇಕೇ ಹೊರತು ಮೋದಿ ಕಣ್ಣೀರಲ್ಲ: ಮನೀಷ್ ಸಿಸೋಡಿಯಾ

Manjula VN

ನವದೆಹಲಿ: ಪ್ರಸ್ತುತ ದೇಶದಲ್ಲಿರುವ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಬೇಕೇ ಹೊರತು, ಪ್ರಧನಮಂತ್ರಿ ನರೇಂದ್ರ ಮೋದಿಯವರ ಕಣ್ಣೀರು ದೇಶಕ್ಕೆ ಬೇಕಿಲ್ಲ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಸೋಮವಾರ ಹೇಳಿದ್ದಾರೆ.

ನಿನ್ನೆಯಷ್ಟೇ ಗೋವಾದಲ್ಲಿ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿ ಮೊದಲ ಬಾರಿಗೆ ನೋಟು ನಿಷೇಧ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿಯವರು, ದೇಶಕ್ಕಾಗಿಯೇ ನಾನು ನನ್ನ ಕುಟುಂಬ ಹಾಗೂ ಮನೆಯನ್ನು ತೊರೆದೆ ಎಂದು ಭಾವುಕರಾಗಿ ಮಾತನಾಡಿದ್ದರು.

ಈ ಹೇಳಿಕೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಮನೀಷ್ ಸಿಸೋಡಿಯಾ ಅವರು, ದುಬಾರಿ ನೋಟಿನ ಮೇಲೆ ನಿಷೇಧ ಹೇರಿಕೆಯಿಂದಾದಿ ಜನರು ಹಣಕ್ಕಾಗಿ ಸಂಕಷ್ಟವನ್ನು ಪಡುತ್ತಿದ್ದಾರೆ. ಎಟಿಎಂ ಹಾಗೂ ಬ್ಯಾಂಕ್ ಗಳಲ್ಲಿ ಸಾಲಿನಲ್ಲಿ ನಿಂತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವ್ಯಾಪಾರ, ವ್ಯವಹಾರ ವಹಿವಾಟುಗಳ ಮೇಲೆ ಪರಿಣಾಮ ಬೀರಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಜನತೆಗೆ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಬೇಕೇ ಹೊರತು ಪ್ರಧಾನಿ ಮೋದಿಯವರ ಕಣ್ಣೀರಲ್ಲ ಎಂದು ಹೇಳಿದ್ದಾರೆ.

SCROLL FOR NEXT