ದೇಶ

ಗುರುತು ಪತ್ರವಿಲ್ಲದೆ 6 ಲಕ್ಷ ರೂ ವಿನಿಮಯ: ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕೇಸು ದಾಖಲು

Sumana Upadhyaya
ಹೈದರಾಬಾದ್: ಅಪಮೌಲ್ಯಗೊಂಡ 500, 1000 ಮುಖಬೆಲೆಯ 6 ಲಕ್ಷ ರೂಪಾಯಿಗಳನ್ನು ಗುರುತು ಪತ್ರವಿಲ್ಲದೆ ವಿನಿಮಯ ಮಾಡಿಕೊಂಡದ್ದಕ್ಕಾಗಿ ಇಬ್ಬರು ಬ್ಯಾಂಕ್ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೈದರಾಬಾದಿನ ಸರೂರ್ ನಗರ್ ನ ಸಿಂಡಿಕೇಟ್ ಬ್ಯಾಂಕ್ ನ ಕಮಲಾ ನಗರ ಶಾಖೆಯ ವ್ಯವಸ್ಥಾಪಕರು ಇಬ್ಬರು ನೌಕರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿ.ಮಲ್ಲೇಶ್ ಎಂಬ ಕ್ಲರ್ಕ್ 1000 ಮತ್ತು 500 ರೂಪಾಯಿಗಳ ನೋಟುಗಳನ್ನು ಕ್ಯಾಶಿಯರ್ ರಾಧಿಕಾ ಅವರಿಗೆ ಕೊಟ್ಟು 2000 ರೂಪಾಯಿಗಳ ಹೊಸ ನೋಟುಗಳನ್ನು ಪಡೆದುಕೊಂಡರು. ಬ್ಯಾಂಕಿನ ವ್ಯವಸ್ಥಾಪಕರು ತನಿಖೆ ನಡೆಸುವಾಗ ಗುರುತು ಪತ್ರವಿಲ್ಲದೆ ಇವರು ವ್ಯವಹಾರ ನಡೆಸಿರುವುದು ಗೊತ್ತಾಯಿತು. ಸರೂರ್ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ವಿಶ್ವಾಸ ವಂಚನೆ ಕೇಸು ದಾಖಲಾಗಿದೆ.
ಸೇವೆಯಿಂದ ವಜಾಗೊಂಡ ನಂತರ ಮಲ್ಲೇಶ್ 5.6 ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ತಂದುಕೊಟ್ಟು ಉಳಿದ ಹಣವನ್ನು ಖರ್ಚು ಮಾಡಿರುವುದಾಗಿ ಹೇಳಿದ್ದಾರೆ.
ಅಷ್ಟೊಂದು ಹಣ ಮಲ್ಲೇಶ್ ಗೆ ಎಲ್ಲಿಂದ ಬಂತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  
ರಿಸರ್ವ್ ಬ್ಯಾಂಕ್ ನಿಯಮ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 4 ಸಾವಿರ ರೂಪಾಯಿಗಳವರೆಗೆ ಆಧಾರ್ ಕಾರ್ಡ್ ಅಥವಾ ಇತರ ಗುರುತು ಪತ್ರ ನೀಡಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
SCROLL FOR NEXT