ದೇಶ

ಬಡವರ ಪರವಾದ ನಿರ್ಧಾರವನ್ನು ಕಡೆಗಣಿಸುತ್ತಿವೆ ವಿರೋಧ ಪಕ್ಷಗಳು: ವೆಂಕಯ್ಯ ನಾಯ್ಡು

Manjula VN

ನವದೆಹಲಿ: ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಕೇಂದ್ರ ಸರ್ಕಾರ ಬಡವರ ಪರವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿರ್ಧಾರವನ್ನು ವಿರೋಧ ಪಕ್ಷಗಳು ಕಡೆಗಣಿಸುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.

ರು.500 ಹಾಗೂ 1,000 ಮುಖಬೆಲೆ ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಕುರಿತಂತ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅಕ್ರಮ ತಡೆಯಲು ದಿಢೀರ್ ತೆಗೆದುಕೊಳ್ಳಬೇಕಾದದ್ದು ಅಗತ್ಯವಾಗಿದ್ದು, ಹೀಗಾಗಿ ಕೇಂದ್ರ ಯಾವ ಸುಳಿವನ್ನು ನೀಡದೆಯೇ ದಿಢೀರನೇ ನಿರ್ಧಾರ ತೆಗೆದುಕೊಂಡಿತ್ತು ಎಂದು ಹೇಳಿದ್ದಾರೆ.

ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಮಾಹಿತಿ ನೀಡಿದ್ದರೆ, ನಮ್ಮ ನಿರ್ಧಾರ ವ್ಯರ್ಥವಾಗುತ್ತಿತ್ತು. ನಿರ್ಧಾರದಿಂದ ಯಾವುದೇ ರೀತಿಯ ಪರಿಣಾಮವಾಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಬಡವರ ಪರವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಬಡವರ ಪರವಾದ ಈ ನಿರ್ಧಾರವನ್ನು ಕೆಲ ವಿರೋಧ ಪಕ್ಷಗಳು ಕಡೆಗಣಿಸಿ, ನಿರ್ಧಾರದ ವಿರುದ್ಧ ಹೋರಾಟವನ್ನು ಮಾಡುತ್ತಿದೆ.

SCROLL FOR NEXT