ಸಾಂದರ್ಭಿಕ ಚಿತ್ರ 
ದೇಶ

ಚಿನ್ನ, ವಜ್ರ, ವಿದೇಶಿ ಕರೆನ್ಸಿಗಳಲ್ಲಿ ಕಪ್ಪು ಹಣ ಹೂಡಿಕೆ: ತನಿಖೆಗೆ ಮುಂದಾದ ಐಟಿ ಇಲಾಖೆ

ಕೇಂದ್ರ ಸರ್ಕಾರ ಅಧಿಕ ಮೌಲ್ಯದ ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ಬೆನ್ನಲ್ಲೇ...

ನವದೆಹಲಿ: ಕೇಂದ್ರ ಸರ್ಕಾರ ಅಧಿಕ ಮೌಲ್ಯದ ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ಬೆನ್ನಲ್ಲೇ ಅಕ್ರಮವಾಗಿ ಸಂಪತ್ತನ್ನು ಕೂಡಿಟ್ಟವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವ ಪ್ರಮಾಣ ಹೆಚ್ಚಾಗಿರುವುದರಿಂದ ತೆರಿಗೆ ಅಧಿಕಾರಿಗಳು ಜ್ಯುವೆಲ್ಲರಿ ಮಳಿಗೆಗಳ ಮೇಲೆ ಕಣ್ಗಾವಲು ಇರಿಸಿದ್ದಾರೆ. ಅನೇಕ ಜ್ಯುವೆಲ್ಲರಿ ಶೋರೂಂಗಳಲ್ಲಿ ಅಳವಡಿಸಿರುವ ಸಿಸಿಟಿವಿ ಫೂಟೇಜ್ ಗಳನ್ನು ಗಮನಿಸುತ್ತಿದ್ದಾರೆ. 
ಅಬಕಾರಿ ಗುಪ್ತಚರ ಇಲಾಖೆಯ ಸಿಬ್ಬಂದಿ ಇತರ ಜ್ಯುವೆಲ್ಲರಿ ಶೋರೂಂಗಳ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ.ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ಅಬಕಾರಿ ಗುಪ್ತಚರ ನಿರ್ದೇಶನಾಲಯ ಈ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸೇರಿ ಅಕ್ರಮ ಹಣ ಸಂಗ್ರಹದ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಕೈಜೋಡಿಸಿದೆ.
ಎಎನ್ಐ ಸುದ್ದಿ ಸಂಸ್ಥೆಯಲ್ಲಿ ಬಂದಿರುವ ಸುದ್ದಿ ಪ್ರಕಾರ, ಚಿನ್ನದ ಖರೀದಿ ಮತ್ತು ವಿದೇಶಿ ಕರೆನ್ಸಿಗಳ ಖರೀದಿಯಲ್ಲಿ ಹಣ ಹೂಡಿಕೆ ಮಾಡುವವರ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಿವೆ.
ಸಾಮಾನ್ಯ ರೈತರ ಖಾತೆಗಳಿಗೆ ಏಕಾಏಕಿ ಭಾರೀ ಮೊತ್ತ ಠೇವಣಿಯಾದ ಬಗ್ಗೆ ಎರಡೂ ಸಂಸ್ಥೆಗಳು ತನಿಖೆ ನಡೆಸುತ್ತಿವೆ. 
ದೇಶಾದ್ಯಂತ 25 ಪ್ರಮುಖ ನಗರಗಳಲ್ಲಿನ ಜ್ಯುವೆಲ್ಲರಿ ಮಾಲಿಕರಿಗೆ, ಚಿನ್ನ ತಯಾರಕರಿಗೆ ನೊಟೀಸುಗಳನ್ನು ಕಳುಹಿಸಿರುವ ಆದಾಯ ತೆರಿಗೆ ಇಲಾಖೆ ನವೆಂಬರ್ 7ರಿಂದ ನವೆಂಬರ್ 10ರವರೆಗೆ ಪ್ರತಿದಿನ ಎಷ್ಟು ಮೊತ್ತದ ವ್ಯವಹಾರ ನಡೆದಿದೆ ಎಂದು ಲೆಕ್ಕಪತ್ರ ನೀಡುವಂತೆ ಆದೇಶ ನೀಡಿದೆ. ಈ ತನಿಖೆ ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವಿಸ್ತರಣೆಯಾಗಲಿದೆ.
ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ನಿಷೇಧಿಸಿದ ನಂತರ ಕಪ್ಪು ಹಣ ಹೊಂದಿದ್ದವರು ಚಿನ್ನದಲ್ಲಿ ಹೂಡಿಕೆ ಮಾಡುವ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇದರಿಂದಾಗಿ ಸಹಜವಾಗಿ ಚಿನ್ನದ ಬೆಲೆ ಏರಿಕೆಯಾಗಿದೆ. ಕಳೆದ ವಾರ ಚಿನ್ನಕ್ಕೆ 10 ಗ್ರಾಮ್ ಗೆ 50 ಸಾವಿರ ರೂಪಾಯಿಗೆ ಏರಿಕೆಯಾಗಿತ್ತು. ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಗ್ರಾಂಗೆ 3 ಸಾವಿರ ರೂಪಾಯಿ ದಾಟಿದೆ. 
2 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಚಿನ್ನವನ್ನು ಖರೀದಿಸಿದರೆ ಪ್ಯಾನ್ ನಂಬರ್ ನೀಡುವುದು ಕಡ್ಡಾಯ, ಜ್ಯುವೆಲ್ಲರಿ ಶಾಪ್ ನವರು ಚಿನ್ನ ಮಾರಾಟ ಮಾಡುವಾಗ ನಿಯಮಗಳನ್ನು ಮುರಿದಿದ್ದರೇ ಎಂಬ ಬಗ್ಗೆ ಕೂಡ ಇಲಾಖೆ ಪರಿಶೀಲನೆ ನಡೆಸಲಿದೆ.
ಅಕ್ರಮ ಹಣ ವಿನಿಯಮಯವನ್ನು ತಡೆಗಟ್ಟಲು ಜ್ಯುವೆಲ್ಲರಿ ಮತ್ತು ಡೈಮಂಡ್ ವ್ಯಾಪಾರಸ್ಥರಿಗೆ ಹಳೆ 500 ಮತ್ತು 1000 ರೂಪಾಯಿ ನೋಟುಗಳನ್ನು ಠೇವಣಿ ಮಾಡಲು ನಿಗದಿತ ಸಮಯವನ್ನು ನೀಡಿದೆ. ಆದರೂ ಕೂಡ ಹಳೆಯ ದಿನಾಂಕಗಳ ಕ್ಯಾಶ್ ರಸೀದಿಯನ್ನು ನೀಡಬಹುದು ಎಂಬ ಭೀತಿ ಕೂಡ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT