ಟೋಲ್ ಫ್ರೀ ಹಾಗೂ ಎಟಿಎಂ (ಸಂಗ್ರಹ ಚಿತ್ರ) 
ದೇಶ

ಡಿ.30ರವರೆಗೂ ಎಟಿಎಂ ಶುಲ್ಕಕ್ಕೆ ವಿನಾಯಿತಿ, ಟೋಲ್ ಫ್ರೀ ಅವಧಿ ಕೂಡ ವಿಸ್ತರಣೆ

ನೋಟು ನಿಷೇಧ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ದೇಶದಲ್ಲಿ ವ್ಯಾಪಕವಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದ್ದು, ಪ್ರಮುಖ ಬೆಳವಣಿಗೆಯೊಂದರಲ್ಲಿ ಡಿಸೆಂಬರ್ 30ರವರೆಗೂ ಎಟಿಎಂಗಳಲ್ಲಿ ವಿತ್ ಡ್ರಾಗಳಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದೆ.

ನವದೆಹಲಿ: ನೋಟು ನಿಷೇಧ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ದೇಶದಲ್ಲಿ ವ್ಯಾಪಕವಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದ್ದು, ಪ್ರಮುಖ ಬೆಳವಣಿಗೆಯೊಂದರಲ್ಲಿ ಡಿಸೆಂಬರ್  30ರವರೆಗೂ ಎಟಿಎಂಗಳಲ್ಲಿ ವಿತ್ ಡ್ರಾಗಳಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದೆ.

ನೋಟು ರದ್ಧತಿ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ತುರ್ತು ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರತಿನಿತ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಸ್ಥಿತಿ ಅವಲೋಕಿಸುತ್ತಿದೆ.  ಅಂತೆಯೇ ಆಯಾಕಾಲಕ್ಕೆ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದೆ. ಇನ್ನು ಪ್ರಮುಖ ಬೆಳವಣಿಗೆಯೊಂದರಲ್ಲಿ ಎಟಿಎಂಗಳಲ್ಲಿ ಗ್ರಾಹಕರು ಪಡೆಯುವ ಹಣದ ಮೇಲಿನ  ಮಿತಿಯನ್ನು ಸಡಿಲಗೊಳಿಸಿರುವ ಕೇಂದ್ರ ಸರ್ಕಾರ ಡಿಸೆಂಬರ್ 30ರವರೆಗೂ ಜನರು ಎಷ್ಟು ಬಾರಿ ಬೇಕಾದರೂ ಹಣ ಡ್ರಾ ಮಾಡುವಂತೆ ವಿನಾಯಿತಿ ನೀಡಿದೆ.

ಡಿಸೆಂಬರ್ 30ರವರೆಗೂ ಎಟಿಎಂಗಳಲ್ಲಿ ಗ್ರಾಹಕರು ಎಷ್ಟು ಬಾರಿ ಹಣ ತೆಗೆದರೂ ಶುಲ್ಕ ವಿಧಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಗ್ರಾಹಕರು ತಾವು ಹೊಂದಿರುವ ಖಾತೆಯ ಬ್ಯಾಂಕ್,  ಇತರೆ ಬ್ಯಾಂಕ್'ಗಳಲ್ಲಿ ಎಷ್ಟು ಬಾರಿ ಹಣ ಹೊರ ತೆಗೆದರೂ ಶುಲ್ಕ ವಿಧಿಸಲಾಗುವುದಿಲ್ಲ. ಇದು ಹಣಕಾಸಿನ ಹಾಗೂ ಹಣಕಾಸಿನೇತರ ಪ್ರಕ್ರಿಯೆಗೆ ಅನ್ವಯವಾಗುತ್ತದೆ. ಇದು ನವೆಂಬರ್ 10 ರಿಂದ ಡಿಸೆಂಬರ್ 30ರವರೆಗೂ  ಅನ್ವಯವಾಗಲಿದೆ ಎಂದು ತಿಳಿಸಿದೆ.

ನೋಟ್ ನಿಷೇಧ; ಹೆದ್ದಾರಿಗಳಲ್ಲಿನ ಟೋಲ್ ಫ್ರೀ ಅವಧಿ ವಿಸ್ತರಣೆ
ಇದೇ ವೇಳೆ ನೋಟು ನಿಷೇಧದ ಬಳಿಕ ಉಂಟಾಗಿರುವ ಚಿಲ್ಲರೆ ಸಮಸ್ಯೆ ಮುಂದುವರೆದಿರುವಂತೆಯೇ ಕೇಂದ್ರ ಸರ್ಕಾರ ಕೂಡ ತನ್ನ ಟೋಲ್ ಫ್ರೀ ಅವಧಿಯನ್ನು ವಿಸ್ತರಣೆ ಮಾಡಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೇಂದ್ರ  ಸಾರಿಗೆ ಇಲಾಖೆ ಟೋಲ್ ಫ್ರೀ ಅವಧಿಯನ್ನು ನವೆಂಬರ್18ರ ಮಧ್ಯರಾತ್ರಿವರೆಗೂ ವಿಸ್ತರಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಟೋಲ್ ಬೂತ್​ಗಳಲ್ಲಿ ವಾಹನ ಸವಾರರು ಯಾವುದೇ ಶುಲ್ಕ ಕಟ್ಟುವಂತಿಲ್ಲ, ತೆಗೆದುಕೊಂಡರೆ ಸೂಕ್ತ  ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಹಳೇ ನೋಟುಗಳನ್ನು ಸ್ವೀಕರಿಸದೇ ಇದ್ದುದ್ದರಿಂದ ಟೋಲ್​ ಗಳಲ್ಲಿ ಭಾರೀ ಸಮಸ್ಯೆಯಾಗಿತ್ತು. ಭಾರೀ ಟ್ರಾಫಿಕ್​ ಜಾಮ್​ಗೆ ಕಾರಣವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಟೋಲ್ ಫ್ರೀ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT