ನವದೆಹಲಿ: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ 11 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದೇವೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತೀಯ ಸೇನೆ ತಳ್ಳಿಹಾಕಿದೆ.
ಭಾರತೀಯ ಸೇನೆ ಪಾಕಿಸ್ತಾನದ 7 ಸೈನಿಕರನ್ನು ಹತ್ಯೆ ಮಾಡಿದ್ದ ದಿನದಂದೇ ಪಾಕಿಸ್ತಾನ ಸೇನೆ 11 ಭಾರತೀಯ ಯೋಧರನ್ನು ಹತ್ಯೆ ಮಾಡಿತ್ತು ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಹೇಳಿದ್ದರು. ಇದಕ್ಕೆ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತತ ಸೇನಾಧಿಕಾರಿ ಪಾಕಿಸ್ತಾನ ಆರೋಪವನ್ನು ತಳ್ಳಿಹಾಕಿದ್ದು, ಗಡಿಯಲ್ಲಿ ಭಾರತದ ಯಾವುದೇ ಯೋಧರು ಮೃತಪಟ್ಟಿಲ್ಲ ಎಂದು ಟ್ವೀಟಿಸಿದ್ದಾರೆ.
ಗಡಿಯಲ್ಲಿ ನಮ್ಮ ದೇಶದ 7 ಮಂದಿ ಸೈನಿಕರು ಹುತಾತ್ಮರಾದಾಗ ನಾವು ಕನಿಷ್ಠ 11 ಮಂದಿ ಭಾರತೀಯ ಸೈನಿಕರನ್ನ ಕೊಂದಿದ್ದೇವೆ. ಪಾಕಿಸ್ತಾನ ಇತ್ತೀಚೆಗೆ ಸುಮಾರು 44 ಭಾರತೀಯ ಸೈನಿಕರನ್ನು ಕೊಂದು ಹಾಕಿದೆ . ಆದರೇ ಭಾರತ ಮಾತ್ರ ಇದನ್ನು ಒಪ್ಪಿಕೊಳ್ಳದೇ ಸುಮ್ಮನೆ ಧೈರ್ಯ ಪ್ರದರ್ಶನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ತನಗಾದ ನಷ್ಟವನ್ನ ಒಪ್ಪಿಕೊಳ್ಳುತ್ತಿಲ್ಲ. ಪಾಕಿಸ್ತಾನ ಸೇನೆ ವೃತ್ತಿಪರವಾದ ಸೇನಾಪಡೆ ಹೊಂದಿದೆ ಎಂದು ಈ ತಿಂಗಳಲ್ಲಿ ನಿವೃತ್ತರಾಗುತ್ತಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಶರೀಫ್ ಹೇಳಿದ್ದಾರೆ. ಆಕ್ರಮಣಕಾರಿ ಕ್ರಮಗಳಿಗೆ ಪ್ರತಿಯಾದ ಫಲಿತಾಂಶ ಇರುತ್ತದೆ ಎಂದು ಅವರು ನರೇಂದ್ರ ಮೋದಿಗೆ ಸಂದೇಶ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics