ಅರುಣ್ ಶೌರಿ 
ದೇಶ

ನೋಟು ನಿಷೇಧಕ್ಕೆ ಅರುಣ್ ಶೌರಿ ವಿರೋಧ: ಆತ್ಮಹತ್ಯೆ ಮಾಡಿಕೊಳ್ಳುವುದು ದಿಟ್ಟ ನಿರ್ಧಾರವೇ?

500-1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ತೀವ್ರವಾಗಿ ವಿರೋಧಿಸಿದ್ದಾರೆ...

ನವದೆಹಲಿ: 500-1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ತೀವ್ರವಾಗಿ ವಿರೋಧಿಸಿದ್ದಾರೆ. 
ನೋಟುಗಳ ನಿಷೇಧದ ಉದ್ದೇಶ ಒಳ್ಳೆಯದಿರಬಹುದು ಆದರೆ ಸರಿಯಾಗಿ ಯೋಜಿಸಿಲ್ಲ ಎಂದು ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಶೌರಿ ಆರೋಪಿಸಿದ್ದು, ಬಾವಿಗೆ ಬೀಳುವುದೂ ದಿಟ್ಟ ನಿರ್ಧಾರ. ಆತ್ಮಹತ್ಯೆ ಮಾಡಿಕೊಳ್ಳುವುದೂ ದಿಟ್ಟ ನಿರ್ಧಾರವೇ ಎಂದು ಪ್ರಶ್ನಿಸಿದ್ದಾರೆ. 
ನೋಟುಗಳ ನಿಷೇಧ ಮಾಡುವುದರಿಂದ ಕಪ್ಪು ಹಣ ನಿಗ್ರಹಿಸಬಹುದು ಎಂದು ಸರ್ಕಾರ ತಪ್ಪು ಕಲ್ಪನೆ ಹೊಂದಿದೆ. ಸರ್ಕಾರ ಏನಾದರೂ ಮಾಡಬೇಕೆಂದಿದ್ದರೆ ಮೊದಲು ತೆರಿಗೆ ಆಡಳಿತದ ವಿಚಾರದಲ್ಲಿ ಸುಧಾರಣೆ ತಂದು ನಂತರ ಮಾಡಬಹುದಾಗಿತ್ತು ಎಂದು ಶೌರಿ ಹೇಳಿದ್ದಾರೆ. 
ಕಪ್ಪುಹಣವನ್ನು ಜನರು ಕ್ಯಾಷ್ ರೂಪದಲ್ಲಿ ಇಟ್ಟುಕೊಳ್ಳುವುದಿಲ್ಲ. ವಿದೇಶದಲ್ಲಿ ಕಪ್ಪುಹಣವನ್ನು ಇಟ್ಟಿರುತ್ತಾರೆ. ಅದು ಡಾಲರ್ ನೋಟ್ ನಲ್ಲೋ ಅಥವಾ ಗನ್ನಿಬ್ಯಾಗ್ ಗಳಲ್ಲೋ ಎಂಬುದು ತಿಳಿದಿರಲಿ. ಆಸ್ತಿ, ಆಭರಣ ಸ್ಟಾಕ್ ಮಾರ್ಕೆಟ್ ಅಥವಾ ಬೇರೆ ಇನ್ಯಾವುದೋ ರೂಪದಲ್ಲಿ ಕಪ್ಪುಹಣ ವಿದೇಶಗಳಲ್ಲಿ ಅಡಗಿಕೊಂಡಿರುತ್ತದೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನ: ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ- ಬಿಜೆಪಿ

SCROLL FOR NEXT