ಸಂಗ್ರಹ ಚಿತ್ರ 
ದೇಶ

ಅಳಿಸಲಾಗದ ಶಾಯಿ ಬಳಕೆ ನಿಲ್ಲಿಸಿ: ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ

ನೋಟು ಬದಲಾವಣೆ ಜನರ ಕೈ ಬೆರಳುಗಳಿಗೆ ಹಚ್ಚಲಾಗುತ್ತಿರುವ ಅಳಿಸಲಾಗದ ಶಾಯಿ ಬಳಕೆಯನ್ನು ಕೂಡಲೇ ನಿಲ್ಲಿಸುವಂತೆ ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ ಸೂಚಿಸಿದೆ...

ನವದೆಹಲಿ: ನೋಟು ಬದಲಾವಣೆ ಜನರ ಕೈ ಬೆರಳುಗಳಿಗೆ ಹಚ್ಚಲಾಗುತ್ತಿರುವ ಅಳಿಸಲಾಗದ ಶಾಯಿ ಬಳಕೆಯನ್ನು ಕೂಡಲೇ ನಿಲ್ಲಿಸುವಂತೆ ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ ಸೂಚಿಸಿದೆ.

ಶಾಯಿ ಬಳಕೆ ಕುರಿತಂತೆ ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ ಪತ್ರವೊಂದನ್ನು ಬರದೆದಿದ್ದು, ಗ್ರಾಹಕರ ಕೈಬೆರಳುಗಳಿಗೆ ಹಾಕಲಾಗುತ್ತಿರುವ ಅಳಿಸಲಾಗದ ಶಾಯಿ ಭಲಕೆಯನ್ನು ನಿಲ್ಲಿಸುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.

ರು.500 ಹಾಗೂ 1,00 ಮುಖಬೆಲೆಯ ದುಬಾರಿ ನೋಟುಗಳ ಬದಲಾವಣೆ ವೇಳೆ ಬ್ಯಾಂಕ್ ಗಳಲ್ಲಿ ಒತ್ತಡ ಕಡಿಮೆ ಮಾಡುವ ಹಲವಾಗಿ ಹಾಗೂ ಕಪ್ಪು ಹಣವನ್ನು ಇತರೆ ವ್ಯಕ್ತಿಗಳ ಮೂಲಕ ಬದಲಾವಣೆ ಮಾಡುವುದಕ್ಕೆ ತಡೆಯೊಡ್ಡುವ ಸಲುವಾಗಿ ಕೇಂದ್ರ ಸರ್ಕಾರ ಬಲಗೈ ಹೆಬ್ಬೆರಳುಗಳಿಗೆ ಶಾಯಿ ಹಾಕುವ ಕ್ರಮವನ್ನು ಜಾರಿಗೆ ತಂದಿತ್ತು.

ಈ ಹಿನ್ನಲೆಯಲ್ಲಿ ವಿತ್ತ ಸಚಿವಾಲಯಕ್ಕೆ ಚುನಾವಣಾ ಆಯೋಗ ಪತ್ರ ಬರೆದಿದ್ದು, ಗ್ರಾಹಕರ ಕೈ ಬೆರಳುಗಳಿಗೆ ಅಳಿಸಲಾಗದ ಶಾಯಿಯ ಗುರುತನ್ನು ಹಾಕುವುದರಿಂದ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದೆ.

ಮುಂದಿನ ವರ್ಷದಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 19 ರಂದು ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ಉಪ ಚುನಾವಣೆ ನಡೆಯಲಿದೆ. ಚುನಾವಣೆ ವೇಳೆ ಮತದಾರರ ಎಡಗೈ ತೋರು ಬೆರಳಿನ ಮೇಲೆ ಶಾಯಿ ಗುರುತು ಹಾಕಲಾಗುತ್ತದೆ.

ಚುನಾವಣೆ ವೇಳೆ ಎಡಗೈ ತೋರು ಬೆರಳಿನ ಮೇಲೆ ಶಾಯಿ ಗುರುತು ಹಾಕುವುದರಿಂದ, ಯಾವುದೇ ಗೊಂದಲಗಳು ಉಂಟಾಗದಿರಲು ಎಚ್ಚರಿಕೆ ವಹಿಸಿರುವ ಸರ್ಕಾರ ಬ್ಯಾಂಕುಗಳಲ್ಲಿ ನೋಟು ಬದಲಾವಣೆ ಸಂದರ್ಭದಲ್ಲಿ ಜನರ ಬಲಗೈ ತೋರು ಬೆರಳುಗಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದ ಎಂದು ವರದಿಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

SCROLL FOR NEXT