ದೇಶ

2.5 ಲಕ್ಷ ರುಪಾಯಿ ಮೇಲಿನ ಡೆಪೊಸಿಟ್ ಗೆ ಪಾನ್ ಕಾರ್ಡ್ ಕಡ್ಡಾಯ

Lingaraj Badiger
ನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಆದಾಯ ತೆರಿಗೆ ಇಲಾಖೆ ಕಪ್ಪು ಹಣಕ್ಕೆ ಕಡಿವಾಣ ಹಾಕಲು 2.5 ಲಕ್ಷ ರುಪಾಯಿಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಪಾನ್ ಕಾರ್ಡ್ ಕಡ್ಡಾಯಗೊಳಿಸಿದೆ.
ಹಳೆ 500 ಹಾಗೂ 1000 ರುಪಾಯಿ ನೋಟ್ ಗಳನ್ನು ಬ್ಯಾಂಕ್ ಗೆ ಜಮೆ ಮಾಡಲು ಅವಕಾಶ ನೀಡಿರುವುದರಿಂದ ಇದರ ದುರ್ಬಳೆಯಾಗದಿರಲಿ ಎಂಬ ಉದ್ದೇಶದಿಂದ ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದು ದಿನದಲ್ಲಿ 50 ಸಾವಿರ ರುಪಾಯಿ ನಗದು ಜಮೆ ಮಾಡಲು ಸಹ ಪಾನ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಯಾವುದೇ ಸಮಯದಲ್ಲೂ ಬ್ಯಾಂಕ್ ಅಥವಾ ಅಂಚೆಕಚೆರಿಯಲ್ಲಿ ನಿಮ್ಮ ಖಾತೆಗೆ ಹಣ ಜಮೆ ಮಾಡಲು ಅಥವಾ ಹೊಸದಾಗಿ ಖಾತೆ ಆರಂಭಿಸಲು ಪಾನ್ ಕಾರ್ಡ್ ಕಡ್ಡಾಯವಾಗಿ ಬೇಕು ಎಂದು ಇಲಾಖೆ ತಿಳಿಸಿದೆ.
SCROLL FOR NEXT